ADVERTISEMENT

ಆಸ್ಟ್ರೇಲಿಯಾದಲ್ಲಿ ಭಾರೀ ಪ್ರವಾಹ: 8 ಸಾವು

ಏಜೆನ್ಸೀಸ್
Published 28 ಫೆಬ್ರುವರಿ 2022, 13:05 IST
Last Updated 28 ಫೆಬ್ರುವರಿ 2022, 13:05 IST
ಭಾರಿ ಮಳೆಯಿಂದ ಆಸ್ಟ್ರೇಲಿಯಾದ ಪೂರ್ವ ಭಾಗದ ಕರಾವಳಿ ಪ್ರದೇಶಗಳಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, ಮೇರಿಬರೊ ಎಂಬಲ್ಲಿ ಇಂತಹ ದೃಶ್ಯ ಸಾಮಾನ್ಯವಾಗಿತ್ತು  –ಎಪಿ/ಪಿಟಿಐ ಚಿತ್ರ
ಭಾರಿ ಮಳೆಯಿಂದ ಆಸ್ಟ್ರೇಲಿಯಾದ ಪೂರ್ವ ಭಾಗದ ಕರಾವಳಿ ಪ್ರದೇಶಗಳಲ್ಲಿ ಪ್ರವಾಹ ಕಾಣಿಸಿಕೊಂಡಿದ್ದು, ಮೇರಿಬರೊ ಎಂಬಲ್ಲಿ ಇಂತಹ ದೃಶ್ಯ ಸಾಮಾನ್ಯವಾಗಿತ್ತು  –ಎಪಿ/ಪಿಟಿಐ ಚಿತ್ರ   

ಬ್ರಿಸ್ಬೇನ್‌ (ಎಪಿ): ಆಸ್ಟ್ರೇಲಿಯಾದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ದೇಶದ 3ನೇ ಅತಿ ದೊಡ್ಡ ನಗರ, ಕ್ವಿನ್ಸ್‌ಲ್ಯಾಂಡ್‌ನ ರಾಜಧಾನಿ ಬ್ರಿಸ್ಬೇನ‌್ ಜಲಾವೃತಗೊಂಡಿದ್ದು, ಪ್ರವಾಹದಿಂದ ಎಂಟು ಮಂದಿ ಮೃತಪಟ್ಟಿದ್ದಾರೆ.ಕಾಣೆಯಾದವರಿಗೆ ಹುಡುಕಾಟ ನಡೆಸಲಾಗುತ್ತಿದೆ.

ಬ್ರಿಸ್ಬೇನ್‌ ನದಿ ಪ್ರವಾಹಕ್ಕೆ 2,145 ಮನೆಗಳು, 2,356 ವ್ಯಾಪಾರ ಉದ್ಯಮದ ಕಟ್ಟಡಗಳು ನೀರಿನಲ್ಲಿ ಮುಳುಗಿವೆ. 10,827 ಆಸ್ತಿಗಳೂ ಭಾಗಶಃ ಪ್ರವಾಹದಿಂದ ಹಾನಿಗೊಂಡಿವೆ. ಸಂಚಾರ ವ್ಯವಸ್ಥೆಯೂ ಅಸ್ತವ್ಯಸ್ತಗೊಂಡಿದೆ. ನದಿ ಪಾತ್ರದಲ್ಲಿರುವ ವ್ಯಾಪಾರ ಮಳಿಗೆಗಳನ್ನು ಸ್ಥಳಾಂತರಿಸಲಾಗಿದೆ. ಪ್ರವಾಹದ ತುರ್ತು ಎಚ್ಚರಿಕೆ ನೀಡಲಾಗಿದೆ.

ಪ್ರವಾಹದಿಂದಾಗಿ ರಸ್ತೆ, ರೈಲು ಮತ್ತು ದೋಣಿಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಾರಿಗೆ ಸಚಿವ ಮಾರ್ಕ್‌ ಬೈಲಿ ತಿಳಿಸಿದ್ದಾರೆ.

ADVERTISEMENT

ಆಸ್ಟ್ರೇಲಿಯಾದ ಮತ್ತೊಂದು ನಗರ ಲಿಸ್‌ಮೋರ್‌ನಲ್ಲಿ ಸಹ ಪ್ರವಾಹ ತಲೆದೋರಿದ್ದು, 15,000 ನಾಗರಿಕರನ್ನು ಸ್ಥಳಾಂತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.