ADVERTISEMENT

ಅಫ್ಗಾನಿಸ್ತಾನದ ಮಹಿಳೆಯರ ರಕ್ಷಣೆ ವಿಚಾರದಲ್ಲಿ ನಾವು ರಾಜಿಯಾಗಬಾರದು: ಮಲಾಲಾ ‌

ರಾಯಿಟರ್ಸ್
Published 25 ಸೆಪ್ಟೆಂಬರ್ 2021, 16:10 IST
Last Updated 25 ಸೆಪ್ಟೆಂಬರ್ 2021, 16:10 IST
   

ವಿಶ್ವಸಂಸ್ಥೆ: ಅಫ್ಗಾನಿಸ್ತಾನದ ಮಹಿಳೆಯರ ರಕ್ಷಣೆ ವಿಚಾರದಲ್ಲಿ ವಿಶ್ವ ನಾಯಕರು ರಾಜಿಯಾಗಬಾರದು ಎಂದು ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಜಾಯ್‌ ಶುಕ್ರವಾರ ಹೇಳಿದ್ದಾರೆ.

‘ಮಹಿಳಾ ಹಕ್ಕು, ಘನತೆಯ ರಕ್ಷಣೆಯಲ್ಲಿ ನಾವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ’ ಎಂದು ಅಫ್ಗಾನಿಸ್ತಾನದ ಬಾಲಕಿಯರ ಶಿಕ್ಷಣಕ್ಕೆ ಸಂಬಂಧಿಸಿದ ಸಮಿತಿಯೊಂದಕ್ಕೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಂತರ ಅವರು ಹೇಳಿದರು.

‘ಅಫ್ಗನ್‌ನ ಮಹಿಳೆಯರ ಹಕ್ಕುಗಳನ್ನು ನಾವು ರಕ್ಷಿಸಬೇಕಿದೆ. ಇದು ನಮ್ಮ ಬದ್ಧತೆ ಪ್ರದರ್ಶಿಸುವ ಸಮಯ. ಮಹಿಳೆಯರ ಪ್ರಮುಖ ಹಕ್ಕುಗಳಲ್ಲಿ ಒಂದು ಶಿಕ್ಷಣದ ಹಕ್ಕು‘ ಎಂದು ಯೂಸುಫ್‌ಜಾಯ್ ಹೇಳಿದರು.

ADVERTISEMENT

ಅಫ್ಗಾನಿಸ್ತಾನದಲ್ಲಿ ಇತ್ತಿಚೆಗೆ ಶಾಲೆಗಳು ಪುನಾರಂಭಗೊಂಡಿವೆ. ಆದರೆ, ಬಾಲಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೆಣ್ಣುಮಕ್ಕಳಿಗೆ ಪ್ರೌಢಶಾಲೆ ನಂತರದ ಶಿಕ್ಷಣವನ್ನು ನಿರ್ಬಂಧಿಸಲಾಗಿದೆ. ಪ್ರೌಢಶಾಲೆ ನಂತರವೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಒದಗಿಸಲು ಪ್ರಯತ್ನಿಸುವುದಾಗಿ ತಾಲಿಬಾನ್‌ ಹೇಳಿದೆಯಾದರೂ ಅದನ್ನು ಖಚಿತಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.