ಮೇವಿಲ್: ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರಿಗೆ ಚಾಕುವಿನಿಂದ ಇರಿದ ಪ್ರಕರಣದ ಆರೋಪಿ ಹಾದಿ ಮಟರ್ (24) ಶೀಘ್ರವೇ ವಿಚಾರಣೆ ಎದುರಿಸಲಿದ್ದಾನೆ.
ಪ್ರಕರಣದ ಮುಖ್ಯ ಸಾಕ್ಷಿಯಾಗಿರುವ ರಶ್ದಿ ಅವರು ಮುಂದಿನ ವಾರ ಘಟನೆ ನಡೆದ ನ್ಯೂಯಾರ್ಕ್‌ನ ಕೌಂಟಿಗೆ ತೆರಳಿದ್ದಾರೆ.
ಕೃತ್ಯ ನಡೆದ ದಿನ ಮತ್ತು ನಂತರದ ಬೆಳವಣಿಗೆ ಕುರಿತು ರಶ್ದಿ ಅವರು ಬರೆದಿರುವ ಪುಸ್ತಕವು ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷ್ಯ ಒದಗಿಸುವ ನಿರೀಕ್ಷೆ ಇದೆ.
ದಾಳಿಯಿಂದಾಗಿ ರಶ್ದಿ ಅವರು ಬಲಗಣ್ಣು ಮತ್ತು ಕೈಯನ್ನು ಶಾಶ್ವತವಾಗಿ ಕಳೆದುಕೊಂಡಿದ್ದಾರೆ.
2022ರ ಆಗಸ್ಟ್ 12ರಂದು ನ್ಯೂಯಾರ್ಕ್ ಸಮೀಪದ ಷಟೌಕ್ವಾ ಎಂಬಲ್ಲಿ ನಡೆದ ಕಾರ್ಯಕ್ರಮದಲ್ಲಿ ರಶ್ದಿ ಅವರ ಮೇಲೆ ಮಟರ್ ದಾಳಿ ನಡೆಸಿ, ಚಾಕುವಿನಿಂದ ಇರಿದಿದ್ದ.
ರಶ್ದಿ ಅವರು ಬರೆದ ‘ಸಟಾನಿಕ್ ವರ್ಸಸ್’ ಎಂಬ ಕಾದಂಬರಿಯಲ್ಲಿ ಇಸ್ಲಾಂ ಧರ್ಮಕ್ಕೆ ಅಪಮಾನವಾಗಿದೆ ಎಂದು ಆರೋಪಿಸಿ ಅವರ ಹತ್ಯೆಗೆ ಇರಾನ್ 1989ರಲ್ಲಿ ಫತ್ವಾ ಹೊರಡಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.