ADVERTISEMENT

ಬ್ರಿಟನ್ ರಾಜ 3ನೇ ಕಿಂಗ್ ಚಾರ್ಲ್ಸ್ ಮೇಲೆ ಮೊಟ್ಟೆ ಎಸೆತ, ಓರ್ವ ಬಂಧನ

ಪಿಟಿಐ
Published 10 ನವೆಂಬರ್ 2022, 2:59 IST
Last Updated 10 ನವೆಂಬರ್ 2022, 2:59 IST
ಬ್ರಿಟನ್ ರಾಜ 3ನೇ ಕಿಂಗ್ ಚಾರ್ಲ್ಸ್
ಬ್ರಿಟನ್ ರಾಜ 3ನೇ ಕಿಂಗ್ ಚಾರ್ಲ್ಸ್   

ಲಂಡನ್: ಬ್ರಿಟನ್ ರಾಜ 3ನೇ ಕಿಂಗ್ ಚಾರ್ಲ್ಸ್ ಮತ್ತು ಅವರ ಪತ್ನಿ, ರಾಣಿ ಕನ್ಸರ್ಟ್‌ ಕ್ಯಾಮಿಲ್ಲಾ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.

ಉತ್ತರ ಇಂಗ್ಲೆಂಡ್‌‌ನ ಯಾರ್ಕ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದ ವೇಳೆ ರಾಜ ಮನೆತನದ ದಂಪತಿ ಮೇಲೆ ಮೊಟ್ಟೆ ಎಸೆತ ಪ್ರಕರಣ ನಡೆದಿದೆ.

ಚಾರ್ಲ್ಸ್ ದಂಪತಿಯನ್ನು ಸ್ವಾಗತಿಸಲು ರಾಜಮನೆತನದ ಮಿಕ್ಲೆಗೇಟ್ ಬಾರ್‌ನಲ್ಲಿ ಜನರು ಜಮಾಯಿಸಿದ್ದರು. ಈ ವೇಳೆ ಪ್ರತಿಭಟನಾಕಾರರೊಬ್ಬರು ಮೂರು ಮೊಟ್ಟೆಗಳನ್ನು ಎಸೆದರು. ಆದರೆ ಅದೃಷ್ಟವಶಾತ್ ಚಾರ್ಲ್ಸ್ ದಂಪತಿ ಮೇಲೆ ಮೊಟ್ಟೆ ಬೀಳಲಿಲ್ಲ.

ADVERTISEMENT

ತಕ್ಷಣವೇ ಕಾರ್ಯಪ್ರವೃತರಾದ ಭದ್ರತಾ ಸಿಬ್ಬಂದಿ ಆತನನ್ನು ಬಂಧಿಸಿದರು.

ಈ ವೇಳೆ ಬಂಧನಕ್ಕೊಳಗಾದ ವ್ಯಕ್ತಿ, 'ಈ ದೇಶವನ್ನು ಗುಲಾಮರ ರಕ್ತದಿಂದ ನಿರ್ಮಿಸಲಾಗಿದೆ' ಎಂದು ಘೋಷಣೆ ಕೂಗಿದರು.

ಯಾರ್ಕ್‌ಶೈರ್ ಭೇಟಿಯಲ್ಲಿರುವ ರಾಜ ಮನೆತನದ ದಂಪತಿ,ಇತ್ತೀಚೆಗೆ ನಿಧನರಾದರಾಣಿ 2ನೇ ಎಲಿಜಬೆತ್ ಪ್ರತಿಮೆಯನ್ನು ಅನಾವರಣಗೊಳಿಸುವುದು ಸೇರಿದಂತೆ ಅನೇಕ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ನಿಗದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.