ADVERTISEMENT

ಉಕ್ರೇನ್ ಬಂದರಿಗೆ ರಷ್ಯಾ ದಾಳಿ: 8 ಮಂದಿ ಸಾವು, 27 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 15:46 IST
Last Updated 20 ಡಿಸೆಂಬರ್ 2025, 15:46 IST
<div class="paragraphs"><p>ಪ್ರಾತಿನಿಧಿಕ </p></div>

ಪ್ರಾತಿನಿಧಿಕ

   

ಕೀವ್: ದಕ್ಷಿಣ ಉಕ್ರೇನ್‌ನ ಒಡೆಸಾದಲ್ಲಿರುವ ಬಂದರಿನ ಮೂಲಸೌಲಭ್ಯದ ಮೇಲೆ ಶುಕ್ರವಾರ ತಡರಾತ್ರಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ 8 ಜನರು ಮೃತಪಟ್ಟಿದ್ದು, 27 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ನ ತುರ್ತು ಸೇವೆ ಶನಿವಾರ ಬೆಳಿಗ್ಗೆ ಹೇಳಿದೆ.

ಗಾಯಗೊಂಡವರಲ್ಲಿ ಕೆಲವರು ದಾಳಿಯ ಕೇಂದ್ರಬಿಂದುವಾಗಿದ್ದ ಬಸ್‌ನಲ್ಲಿದ್ದರು ಎಂದು ಅದು ಟೆಲಿಗ್ರಾಮ್‌ನಲ್ಲಿ ತಿಳಿಸಿದೆ. ದಾಳಿಯಿಂದಾಗಿ ಪಾರ್ಕಿಂಗ್ ಸ್ಥಳದಲ್ಲಿ ಟ್ರಕ್‌ಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಕಾರುಗಳು ಸಹ ಹಾನಿಗೊಳಗಾಗಿವೆ.

ADVERTISEMENT

ಬಂದರಿನ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ಮಾಡಲಾಗಿದೆ ಎಂದು ಒಡೆಸಾ ಪ್ರದೇಶದ ಮುಖ್ಯಸ್ಥ ಒಲೆಹ್ ಕೈಪರ್ ಹೇಳಿದ್ದಾರೆ.

ಮತ್ತೊಂದೆಡೆ, ಉಕ್ರೇನ್‌ನ ಪಡೆಗಳು ರಷ್ಯಾದ ಯುದ್ಧನೌಕೆ ಮತ್ತು ಇತರ ಸೌಲಭ್ಯಗಳನ್ನು ಡ್ರೋನ್ ಮೂಲಕ ಹೊಡೆದುರುಳಿಸಿವೆ ಎಂದು ಉಕ್ರೇನ್‌ ಶನಿವಾರ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.