ADVERTISEMENT

ಚೀನಾದ ಹೊರಗೆ ಕೋವಿಡ್‌–19: ಸೋಂಕು ಪ್ರಕರಣ 28,600ಕ್ಕೂ ಅಧಿಕ

ಏಜೆನ್ಸೀಸ್
Published 10 ಮಾರ್ಚ್ 2020, 2:05 IST
Last Updated 10 ಮಾರ್ಚ್ 2020, 2:05 IST
ಕೋವಿಡ್‌–19 ಸೋಂಕಿನಿಂದ ರಕ್ಷಣೆ ಪಡೆಯಲು ಮಾಸ್ಕ್‌ ಧರಿಸಿರುವ ಮಗು – ಸಂಗ್ರಹ ಚಿತ್ರ
ಕೋವಿಡ್‌–19 ಸೋಂಕಿನಿಂದ ರಕ್ಷಣೆ ಪಡೆಯಲು ಮಾಸ್ಕ್‌ ಧರಿಸಿರುವ ಮಗು – ಸಂಗ್ರಹ ಚಿತ್ರ   

ಜಿನೆವಾ: ಜಾಗತಿಕ ಆರ್ಥಿಕತೆ, ಷೇರುಪೇಟೆ ಹಾಗೂ ತೈಲ ವಹಿವಾಟಿನ ಮೇಲೆ ಪರಿಣಾಮ ಬೀರುತ್ತಿರುವ ಕೊರೊನಾ ವೈರಸ್‌ (ಕೋವಿಡ್‌–19) ಸೋಂಕು ದಿನದಿಂದ ದಿನಕ್ಕೆ ಚೀನಾ ಹೊರಗಿನ ರಾಷ್ಟ್ರಗಳಿಗೆ ವ್ಯಾಪಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಚೀನಾದ ಹೊರಗೆ ಸೋಂಕಿಗೆ ಸಂಬಂಧಿಸಿದ 3,940 ಹೊಸ ಪ್ರಕರಣಗಳು ದಾಖಲಾಗಿವೆ.

ಏಷ್ಯಾದ ಇತರೆ ರಾಷ್ಟ್ರಗಳು, ಅಮೆರಿಕ, ಇಟಲಿ ಸೇರಿದಂತೆ ಇತರೆ ರಾಷ್ಟ್ರಗಳಲ್ಲಿ ಗುರುತಿಸಲಾಗಿರುವ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ 28,600ಕ್ಕೂ ಅಧಿಕ. 104 ರಾಷ್ಟ್ರಗಳಲ್ಲಿ 3,948 ಹೊಸ ಪ್ರಕರಣಗಳು ದಾಖಲಾಗಿದ್ದು, ಸೋಂಕು ಪ್ರಕರಣಗಳ ಸಂಖ್ಯೆ 28,673ಕ್ಕೆ ಏರಿಕೆಯಾಗಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ಹಾಗೇ, ಚೀನಾದ ಹೊರಗೆ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ 686ಕ್ಕೆ ಹೆಚ್ಚಿದೆ.

ADVERTISEMENT

ಭಾರತದಲ್ಲಿ ಸೋಮವಾರ ನಾಲ್ಕು ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸೋಂಕಿತರ ಸಂಖ್ಯೆ 43ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ.

ಚೀನಾದಲ್ಲಿ ಒಟ್ಟು 80,754 ಪ್ರಕರಣಗಳು ದಾಖಲಾಗಿದ್ದು, 3,136 ಮಂದಿ ಸಾವಿಗೀಡಾಗಿದ್ದಾರೆ. ಜಗತ್ತಿನಾದ್ಯಂತ 1,10,029 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಸೋಂಕಿನಿಂದಾಗಿ ಕನಿಷ್ಠ 3,817 ಜನರು ಸಾವಿಗೀಡಾಗಿರುವುದಾಗಿ ವರದಿಯಾಗಿದೆ. ಎಎನ್‌ಐ ಟ್ವೀಟ್‌ ಪ್ರಕಾರ, ಸಾವಿನ ಸಂಖ್ಯೆ 4,000 ಮುಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.