ADVERTISEMENT

ಚೀನಾ ಭೂಕಂಪ: ನಾಲ್ವರ ಸಾವು, 14 ಮಂದಿಗೆ ಗಾಯ

ಪಿಟಿಐ
Published 1 ಜೂನ್ 2022, 14:40 IST
Last Updated 1 ಜೂನ್ 2022, 14:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್‌/ಚೆಂಗ್ಡು: ನೈರುತ್ಯ ಚೀನಾದಸಿಚುವಾನ್‌ ಪ್ರಾಂತ್ಯದ ಯಾನ್‌ನಲ್ಲಿ ಬುಧವಾರ ಮಧ್ಯಾಹ್ನ 6.1 ತೀವ್ರತೆಯ ಭೂಕಂಪ ಸಂಭವಿಸಿದ್ದು ನಾಲ್ವರು ಸಾವನ್ನಪ್ಪಿದ್ದಾರೆ. 14 ಮಂದಿಗೆ ಮಂದಿಗೆ ಗಾಯಗಳಾಗಿವೆ ಎಂದು ಸರ್ಕಾರಿ ಸ್ವಾಮ್ಯದ ಪೀಪಲ್ಸ್‌ ಡೈರಿ ವರದಿ ಮಾಡಿದೆ.

ಸ್ಥಳೀಯ ಕಾಲಮಾನದ ಪ್ರಕಾರ ಸಂಜೆ 5 ಗಂಟೆಗೆ ಯಾನ್‌ನ ಲುಶನ್‌ಕೌಂಟಿಯಲ್ಲಿ ಭೂಕಂಪ ಸಂಭವಿಸಿದೆ ಎಂದು ಚೀನಾದ ಅರ್ಥ್‌ಕ್ವೇಕ್‌ ನೆಟ್‌ವರ್ಕ್‌ ಸೆಂಟರ್‌ (ಸಿಇಎನ್‌ಸಿ) ತಿಳಿಸಿದೆ.

ಲುಶನ್‌ಕೌಂಟಿಯಲ್ಲಿ ಭೂಕಂಪ ಸಂಭವಿಸಿದ ಬಳಿಕ, ಮತ್ತೆ ಬಾಕ್ಸಿಂಗ್‌ ಕೌಂಟಿಯಲ್ಲಿ 4.5 ತೀವ್ರತೆಯ ಭೂಕಂಪ ಉಂಟಾಗಿದೆ.

ADVERTISEMENT

ಯಾನ್‌ನ ಭೂಕಂಪ ಪರಿಹಾರ ಕೇಂದ್ರ ಕಚೇರಿಯನ್ನು ಉಲ್ಲೇಖಿಸಿ, ಸಂಭವಿಸಿರುವ ಎಲ್ಲ ಸಾವು ನೋವುಗಳು ಬಾಕ್ಸಿಂಗ್‌ ಕೌಂಟಿಯಲ್ಲಿಯೇ ನಡೆದಿವೆ ಎಂದು ಸರ್ಕಾರದ ಷಿನ್‌ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಂತ್ರಸ್ತರನ್ನು ಹುಡುಕಲು, ರಕ್ಷಿಸಲು, ರಸ್ತೆಗಳನ್ನು ಸರಿಪಡಿಸಲು, ನಿವಾಸಿಗಳನ್ನು ಸ್ಥಳಾಂತರಿಸಲು ತುರ್ತು ರಕ್ಷಣಾ, ಸಶಸ್ತ್ರ ಪೊಲೀಸ್, ಅಗ್ನಿಶಾಮಕ ಇಲಾಖೆ, ವೈದ್ಯಕೀಯ ಸಿಬ್ಬಂದಿ ಮತ್ತು ಸಾರ್ವಜನಿಕ ಭದ್ರತಾ ಕಚೇರಿಯಿಂದ 800ಕ್ಕೂ ಹೆಚ್ಚು ಸಿಬ್ಬಂದಿಯನ್ನು ಈಗಾಗಲೇ ಭೂಕಂಪ ಪೀಡಿತ ಪ್ರದೇಶಗಳಿಗೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.