ADVERTISEMENT

ಒಮಡ್ರುಮನ್‌ನಲ್ಲಿ ಸುಡಾನ್ ಸೇನೆಯಿಂದ ವೈಮಾನಿಕ ದಾಳಿ: 22 ಮಂದಿ ಸಾವು

ರಾಯಿಟರ್ಸ್‌
Published 8 ಜುಲೈ 2023, 23:30 IST
Last Updated 8 ಜುಲೈ 2023, 23:30 IST
ವೈಮಾನಿಕ ದಾಳಿ
ವೈಮಾನಿಕ ದಾಳಿ    –ಎಎಫ್‌ಪಿ ಚಿತ್ರ

ಕೈರೋ: ಪಶ್ಚಿಮ ಒಮಡ್ರುಮನ್‌ನಲ್ಲಿ ಸುಡಾನ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 22 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಖಾರ್ಟೂಮ್‌ ರಾಜ್ಯದ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ  ಸಂಘರ್ಷ 12ನೇ ವಾರಕ್ಕೆ ಕಾಲಿಟ್ಟಿದೆ. ಇದೂವರೆಗೂ 1,133 ಜನರು ಮೃತಪಟ್ಟಿದ್ದು, 29 ಲಕ್ಷ ಜನರು ನೆರೆಯ ದೇಶಗಳಿಗೆ ವಲಸೆ ಹೋಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

 ‘ವಿಶೇಷ ಪಡೆಗಳು 20 ಬಂಡಾಯ ಸೈನಿಕರನ್ನು ಕೊಂದು, ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ನಾಶಪಡಿಸಿವೆ’ ಎಂದು ಸೇನೆಯು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.