ADVERTISEMENT

ಫೇಸ್‌ಬುಕ್‌ ಸ್ಥಗಿತ: ಬಳಕೆದಾರರಿಗೆ ಕಸಿವಿಸಿ

ಏಜೆನ್ಸೀಸ್
Published 14 ಮಾರ್ಚ್ 2019, 20:03 IST
Last Updated 14 ಮಾರ್ಚ್ 2019, 20:03 IST
   

ಸ್ಯಾನ್‌ ಫ್ರಾನ್ಸಿಸ್ಕೊ: ಜನಪ್ರಿಯ ಸಾಮಾಜಿಕಜಾಲತಾಣ ಫೇಸ್‌ಬುಕ್‌ ಬುಧವಾರಮಧ್ಯಾಹ್ನದಿಂದ ಗುರುವಾರ ಬೆಳಗಿನ ಜಾವದವರೆಗೆಕೆಲವು ಗಂಟೆಗಳ ಕಾಲ ಹಲವು ರಾಷ್ಟ್ರಗಳಲ್ಲಿ ಸ್ಥಗಿತಗೊಂಡಿತ್ತು. ಫೇಸ್‌ಬುಕ್‌ಗೆ ಫೋಟೊ, ವಿಡಿಯೊ ಅಪ್‌ಲೋಡ್‌ ಮಾಡಲು ಸಾಧ್ಯವಾಗದೆ ಬಳಕೆದಾರರು ಪರದಾಡಿದರು.

ಇದೇ ಮೊದಲ ಬಾರಿಗೆಫೇಸ್‌ಬುಕ್‌ ದೀರ್ಘಕಾಲದವರೆಗೂ ಸಂಪರ್ಕ ಕಳೆದುಕೊಂಡಿತ್ತು.

ಇನ್‌ಸ್ಟಾಗ್ರಾಂನಲ್ಲಿ ಬಳಸುವಾಗಲೂ ಸಮಸ್ಯೆ ಎದುರಾಯಿತು. ಆದರೆ, ಕೆಲವೇ ಗಂಟೆಗಳಲ್ಲಿ ಇನ್‌ಸ್ಟಾಗ್ರಾಂ ಸಮರ್ಪಕವಾಗಿ ಕಾರ್ಯನಿರ್ವಹಿಸತೊಡಗಿತು.

ADVERTISEMENT

ಡೆಸ್ಕ್‌ಟಾಪ್‌ ಮತ್ತು ಸ್ಮಾರ್ಟ್‌ಫೋನ್‌ ಎರಡರಲ್ಲಿಯೂ ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ತೆರೆದುಕೊಳ್ಳಲಿಲ್ಲ. ಕೆಲ ಬಳಕೆದಾರರಿಗೆ ಮೆಸೆಂಜರ್‌ ಮೂಲಕ ಸಂದೇಶ ರವಾನಿಸುವುದೂ ಅಸಾಧ್ಯವಾಯಿತು. ಟ್ವಿಟರ್‌ನಲ್ಲಿ ಫೇಸ್‌ಬುಕ್‌ ಡೌನ್‌ (#FacebookDown) ಮತ್ತು ಇನ್‌ಸ್ಟಾಗ್ರಾಮ್‌ ಡೌನ್‌(#instagramdown) ಹ್ಯಾಷ್‌ಟ್ಯಾಗ್‌ ಹಾಕಿ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದರು.

’ಶೀಘ್ರದಲ್ಲಿಯೇ ಹಿಂದಿರುಗಲಿದ್ದೇವೆ’ ಎಂಬ ಒಕ್ಕಣೆಯನ್ನು ಫೇಸ್‌ಬುಕ್‌ ತೋರಿಸಿತು. ’ನಿರ್ವಹಣಾ ಕಾರ್ಯಗಳಿಗಾಗಿ ಫೇಸ್‌ಬುಕ್‌ ಸಂಪರ್ಕ ಸ್ಥಗಿತಗೊಳಿಸಲಾಗಿದೆ’ ಎಂಬ ಪ್ರಕಟಣೆ ನೀಡಿತು. ಆದರೆ, ’ಇದು ಸಂಪರ್ಕ ಸೇವೆ ಸ್ಥಗಿತಗೊಳಿಸಲು ನಡೆದಿರುವ ದಾಳಿ(DDoS)ಗೆ ಸಂಬಂಧಿಸಿದಲ್ಲ’ ಎಂದುಅದು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.