ADVERTISEMENT

ಪಾಕಿಸ್ತಾನ ಸರ್ಕಾರದೊಂದಿಗೆ ಮಾತುಕತೆಗೆ ಮಾಧ್ಯಮಗಳ ನಕಾರ

ಪಿಟಿಐ
Published 2 ಮಾರ್ಚ್ 2020, 19:10 IST
Last Updated 2 ಮಾರ್ಚ್ 2020, 19:10 IST

ಇಸ್ಲಾಮಾಬಾದ್‌: ಸಾಮಾಜಿಕ ಮಾಧ್ಯಮಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರ ಜಾರಿಗೆ ತಂದಿರುವ ಹೊಸ ನಿಯಮಾವಳಿಗಳ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಲು 100ಕ್ಕೂ ಹೆಚ್ಚು ಸಂಸ್ಥೆಗಳು ಹಾಗೂ ಮಾಧ್ಯಮಗಳು ನಿರಾಕರಿಸಿವೆ.ಅಲ್ಲದೆ ಹೊಸ ನಿಯಮಾವಳಿಗಳನ್ನು ಕೂಡಲೇ ವಾಪಸ್‌ ಪಡೆಯುವಂತೆ ಆಗ್ರಹಿಸಿವೆ.

ಹೊಸ ನಿಯಮಗಳ ಪ್ರಕಾರ, ತನಿಖಾ ಸಂಸ್ಥೆಗಳು ಬಯಸಿದಾಗ ಸಾಮಾಜಿಕ ಮಾಧ್ಯಮಗಳು ಮಾಹಿತಿಯನ್ನು ಹಂಚಿಕೊಳ್ಳಬೇಕಾಗುತ್ತದೆ. ಒಂದು ವೇಳೆ ತನಿಖಾ ದಳಗೆ ಮಾಹಿತಿ ನೀಡಲು ನಿರಾಕರಿಸಿದ್ದಲ್ಲಿ ₹50 ಕೋಟಿ ತನಕ ದಂಡ ಕಟ್ಟಬೇಕಾಗುತ್ತದೆ.

ಈ ಷರತ್ತುಗಳಿಗೆ ಫೇಸ್‌ಬುಕ್‌, ಗೂಗಲ್‌ ಮತ್ತು ಟ್ವಿಟರ್‌ ವಿರೋಧ ವ್ಯಕ್ತಪಡಿಸಿದ್ದು, ದೇಶದಲ್ಲಿ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಸಿವೆ.

ADVERTISEMENT

ಡಿಜಿಟಲ್‌ ರೈಟ್‌ ಫೌಂಡೇಶನ್‌, ಇನ್‌ಸ್ಟಿಟ್ಯೂಷನ್‌ ಫಾರ್‌ ರಿಸರ್ಚ್‌, ಅಡ್ವಕಸಿ ಆ್ಯಂಡ್‌ ಡೆವಲಪ್‌ಮೆಂಟ್‌, ಪಾಕಿಸ್ತಾನ್‌ ಬಾರ್‌ ಕೌನ್ಸಿಲ್, ಹ್ಯೂಮನ್‌ ರೈಟ್ಸ್‌ ಕಮಿಷನ್‌ ಆಫ್‌ ಪಾಕಿಸ್ತಾನ, ಪಾಕಿಸ್ತಾನ್‌ ಪ್ರೆಸ್‌ ಫೌಂಡೇಷನ್‌, ಪಾಕಿಸ್ತಾನ ಫೆಡರಲ್‌ ಯೂನಿಯನ್‌ ಆಫ್‌ ಜರ್ನಲಿಸ್ಟ್‌, ಇಂಟರ್‌ನೆಟ್‌ ಸರ್ವಿಸ್‌ ಪ್ರೊವೈಡರ್ಸ್‌ ಅಸೋಸಿಯೇಷನ್‌ ಆಫ್‌ ಪಾಕಿಸ್ತಾನ್‌, ಫ್ರೀಡಂ ನೆಟ್‌ವರ್ಕ್‌ ಸೇರಿದಂತೆ ಇತರೆ ಸಂಸ್ಥೆಗಳು ಸರ್ಕಾರದೊಂದಿಗೆ ಮಾತುಕತೆಯನ್ನು ಬಹಿಷ್ಕರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.