ADVERTISEMENT

ಚೋಕ್ಸಿ‌ಗೆ ಜಾಮೀನು, ಆಂಟಿಗುವಾ ಮತ್ತು ಬಾರ್ಬುಡಾಗೆ ತೆರಳಲು ಡೊಮಿನಿಕಾ ಅವಕಾಶ

ಡೆಕ್ಕನ್ ಹೆರಾಲ್ಡ್
Published 13 ಜುಲೈ 2021, 2:12 IST
Last Updated 13 ಜುಲೈ 2021, 2:12 IST
ಮೆಹುಲ್‌ ಚೋಕ್ಸಿ ಸಾಂದರ್ಭಿಕ ಚಿತ್ರ
ಮೆಹುಲ್‌ ಚೋಕ್ಸಿ ಸಾಂದರ್ಭಿಕ ಚಿತ್ರ   

ನವದೆಹಲಿ: ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ ಸಾವಿರಾರು ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿ, ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಗೆ ಡೊಮಿನಿಕಾ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.

ವೈದ್ಯಕೀಯ ಚಿಕಿತ್ಸೆಗೆ ಆಂಟಿಗುವಾಮತ್ತು ಬಾರ್ಬುಡಾಗೆ ತೆರಳಲು ಮಾತ್ರ ಈ ಜಾಮೀನು ನೀಡಲಾಗಿದ್ದು, ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗಲಿದೆ ಎನ್ನಲಾಗುತ್ತಿದೆ.

ಕೆರಿಬಿಯನ್ ಧ್ವೀಪ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ 2017 ನವೆಂಬರ್‌ನಿಂದ ನಾಗರಿಕತ್ವ ಪಡೆದಿರುವ 62 ವರ್ಷದ ಚೋಕ್ಸಿಯನ್ನು ಅಕ್ರಮವಾಗಿ ಪ್ರವೇಶಿಸಿದ ಕಾರಣಕ್ಕೆ ಸಂಬಂಧಿಸಿದಂತೆ ಮೇ 23ರಂದು ಡೊಮಿನಿಕಾದಲ್ಲಿ ಬಂಧಿಸಲಾಗಿತ್ತು.

ADVERTISEMENT

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ(ಪಿಎನ್‌ಬಿ) ಸುಮಾರು ₹13,500 ಕೋಟಿ ವಂಚಿಸಿದ ಆರೋಪ ಎದುರಿಸುತ್ತಿರುವ ಚೋಕ್ಸಿ ಭಾರತದಿಂದ ಪರಾರಿಯಾಗಿ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸವಾಗಿದ್ದರು. ಡೊಮಿನಿಕಾದ ವಲಸೆ ಸಚಿವಾಲಯವು ಅವರನ್ನು ನಿಷೇಧಿತ ವಲಸೆಗಾರ ಎಂದು ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.