ADVERTISEMENT

ನನ್ನ ಉಡುಗೊರೆ, ನನ್ನ ಆಯ್ಕೆ: ಉಡುಗೊರೆ ಮಾರಿದ ವಿವಾದಕ್ಕೆ ಇಮ್ರಾನ್ ತಿರುಗೇಟು

ಪಿಟಿಐ
Published 18 ಏಪ್ರಿಲ್ 2022, 14:25 IST
Last Updated 18 ಏಪ್ರಿಲ್ 2022, 14:25 IST
ಇಮ್ರಾನ್ ಖಾನ್, ಪಾಕಿಸ್ತಾನ ಮಾಜಿ ಪ್ರಧಾನಿ
ಇಮ್ರಾನ್ ಖಾನ್, ಪಾಕಿಸ್ತಾನ ಮಾಜಿ ಪ್ರಧಾನಿ   

ಇಸ್ಲಾಮಾಬಾದ್: 'ವಿದೇಶಗಳಿಂದ ನನಗೆ ಬಂದಿದ್ದ ಉಡುಗೊರೆಗಳನ್ನು ಇಟ್ಟುಕೊಳ್ಳಬೇಕೇ ಅಥವಾ ಬೇಡವೇ ಎಂಬುದು ನನ್ನ ಆಯ್ಕೆ' ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಪಾಕಿಸ್ತಾನ ಸರ್ಕಾರದ ಭಂಡಾರದಲ್ಲಿರುವ ಉಡುಗೊರೆಗಳನ್ನು ಮಾರಾಟ ಮಾಡಿದ ವಿವಾದಗಳ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಸರ್ಕಾರದ ಭಂಡಾರದಲ್ಲಿರುವ ಉಡುಗೊರೆಗಳನ್ನು ಮಾರಾಟ ಮಾಡಿರುವುದಾಗಿ ಪ್ರತಿಪಕ್ಷ ಮುಸ್ಲಿಂ ಲೀಗ್-ನವಾಜ್(ಪಿಎಂಎಲ್-ಎನ್) ಪಕ್ಷ ಮಾಡಿರುವ ಆರೋಪ ಆಧಾರರಹಿತ. ಸರ್ಕಾರದ ಖಜಾನೆಯಿಂದ ಏನೆಲ್ಲಾ ಪಡೆದಿದ್ದೇನೆ ಎಂಬುದಕ್ಕೆ ದಾಖಲೆಗಳಿವೆ. ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಸಾಕ್ಷಿ ಇರುವವರು ಮುಂದೆ ಬರಬೇಕು ಎಂದು ಸವಾಲು ಹಾಕಿದರು.

ಸರ್ಕಾರದ ಭಂಡಾರದಲ್ಲಿದ್ದಉಡುಗೊರೆಗಳನ್ನು ಆ ಉಡುಗೊರೆಯ ಶೇ 50ರಷ್ಟು ಹಣ ಪಾವತಿಸಿ, ಖರೀದಿಸಿರುವುದಾಗಿಯೂ ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.