ADVERTISEMENT

ಮೆಕ್ಸಿಕೊ ಗಡಿಯಲ್ಲಿ 10 ಸಾವಿರ ಕಾವಲುಗಾರರ ನಿಯೋಜನೆ

ಏಜೆನ್ಸೀಸ್
Published 6 ಫೆಬ್ರುವರಿ 2025, 13:17 IST
Last Updated 6 ಫೆಬ್ರುವರಿ 2025, 13:17 IST
<div class="paragraphs"><p>ಮೆಕ್ಸಿಕೊದ ಉತ್ತರ ಗಡಿಯಲ್ಲಿ ಗಸ್ತು ತಿರುಗುತ್ತಿರುವ ರಾಷ್ಟ್ರೀಯ ಕಾವಲು ಪಡೆಯ ಸೈನಿಕರು </p></div>

ಮೆಕ್ಸಿಕೊದ ಉತ್ತರ ಗಡಿಯಲ್ಲಿ ಗಸ್ತು ತಿರುಗುತ್ತಿರುವ ರಾಷ್ಟ್ರೀಯ ಕಾವಲು ಪಡೆಯ ಸೈನಿಕರು

   

ಸಿಯುಡಾಡ್‌ ಜುವಾರೆಜ್‌ (ಮೆಕ್ಸಿಕೊ): ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಸುಂಕ ಬೆದರಿಕೆಗೆ ಪ್ರತಿಕ್ರಿಯೆಯಾಗಿ ಮೆಕ್ಸಿಕೊ ತನ್ನ ಉತ್ತರ ಗಡಿಭಾಗದಲ್ಲಿ ಸುಮಾರು 10 ಸಾವಿರ ಕಾವಲುಗಾರರನ್ನು ನಿಯೋಜಿಸಲು ಬುಧವಾರ ಪ್ರಾರಂಭಿಸಿದೆ.

ರಾಷ್ಟ್ರೀಯ ಕಾವಲು ಪಡೆ ಮತ್ತು ಸೇನಾ ವಾಹನಗಳು ಟೆಕ್ಸಾಸ್‌ನ ಸಿಯುಡಾಡ್‌ ವ್ಹಾರೆಜ್‌ ಮತ್ತು ಎಲ್‌ ಪಾಸೊ ನಡುವಿನ ಪ್ರದೇಶದಲ್ಲಿ ಗಸ್ತು ತಿರುಗುತ್ತಿವೆ.

ADVERTISEMENT

ಸಿಯುಡಾಡ್‌ ವ್ಹಾರೆಜ್‌ ಬಳಿಯ ಗಡಿಯುದ್ದಕ್ಕೂ ಮುಖವಾಡ ಧರಿಸಿದ ಶಸ್ತ್ರಸಜ್ಜಿತ ರಾಷ್ಟ್ರೀಯ ಕಾವಲು ಪಡೆಯ ಸದಸ್ಯರು ಪೊದೆಗಳ ಮೂಲಕ ಧಾವಿಸಿ, ಕಂದಕಗಳಲ್ಲಿ ಹಾಕಿದ್ದ ತಾತ್ಕಾಲಿಕ ಏಣಿಗಳು ಮತ್ತು ಹಗ್ಗಗಳನ್ನು ವಾಹನಕ್ಕೆ ತುಂಬಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.