ADVERTISEMENT

ಮೆಕ್ಸಿಕೊ: ಪುರಾತನ ದೇವಾಲಯ ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2018, 12:27 IST
Last Updated 12 ಜುಲೈ 2018, 12:27 IST
ಟಿಯೊಪಾಂಜೊಕೊ ಪಿರಮಿಡ್‌ನ ಆವರಣದಲ್ಲಿ ಪತ್ತೆಯಾದ ದೇವಸ್ಥಾನವನ್ನು ಪ್ರಾಚ್ಯವಸ್ತು ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದರು –ಎಎಫ್‌ಪಿ ಚಿತ್ರ
ಟಿಯೊಪಾಂಜೊಕೊ ಪಿರಮಿಡ್‌ನ ಆವರಣದಲ್ಲಿ ಪತ್ತೆಯಾದ ದೇವಸ್ಥಾನವನ್ನು ಪ್ರಾಚ್ಯವಸ್ತು ಇಲಾಖೆ ಸಿಬ್ಬಂದಿ ಪರಿಶೀಲನೆ ನಡೆಸಿದರು –ಎಎಫ್‌ಪಿ ಚಿತ್ರ   

ಕ್ಯೂರ್ನಾವಾಕ (ಮೆಕ್ಸಿಕೊ) (ಎಎಫ್‌ಪಿ): ಕಳೆದ ಸೆಪ್ಟೆಂಬರ್‌ನಲ್ಲಿ ಮೆಕ್ಸಿಕೊದಲ್ಲಿ ಸಂಭವಿಸಿದ್ದ ಭಾರಿ ಭೂಕಂಪವು ಹೊಸ ದೇವಾಲಯವೊಂದು ಬೆಳಕಿಗೆ ಬರಲು ಕಾರಣವಾಗಿದೆ.

ಮೊರೆಲೊಸ್ ರಾಜ್ಯದ ಕ್ಯೂರ್ನಾವಾಕದಲ್ಲಿರುವ ಟಿಯೊಪಾಂಜೊಕೊ ಪಿರಮಿಡ್‌ನ ಆವರಣದಲ್ಲಿ ಈ ದೇಗುಲ ಪತ್ತೆಯಾಗಿದೆ. ಟಿಲಾಹುಕಿ ಸಂಸ್ಕೃತಿಗೆ ಸಂಬಂಧಿಸಿದ ಇದನ್ನು ಟ್ಲಾಲೊಕ್ ಎಂಬ ದೇವತೆಗೆ ಅರ್ಪಿಸಲಾಗಿದೆ.

ಭೂಕಂಪನದಿಂದ ಪಿರಮಿಡ್‌ನ ಮೇಲ್ಭಾಗಕ್ಕೆ ಭಾರಿ ಹಾನಿಯಾಗಿತ್ತು. ಇದನ್ನು ದುರಸ್ತಿ ಮಾಡುವ ವೇಳೆ ದೇಗುಲದ ಅವಶೇಷ ಪತ್ತೆಯಾಗಿದೆ. ಇದರ ಪಕ್ಕದಲ್ಲೇ ಒಂದು ದೇವಸ್ಥಾನ ಈ ಮೊದಲು ಸಿಕ್ಕಿತ್ತು. ಕ್ರಿ.ಶ. 1150ರ ವೇಳೆ ಇದು ನಿರ್ಮಾಣವಾಗಿರಬಹುದು ಎಂದು ಪ್ರಾಚ್ಯವಸ್ತು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸೆರಾಮಿಕ್ ವಸ್ತುಗಳು, ದೀಪದ ಬತ್ತಿಗಳೂ ಇಲ್ಲಿ ಸಿಕ್ಕಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.