ADVERTISEMENT

ಎಂಎಚ್‌ 17 ವಿಮಾನ ದುರಂತದಲ್ಲಿ ರಷ್ಯಾದ ಪಾತ್ರ: ಯುರೋಪ್‌ ನ್ಯಾಯಾಲಯ ತೀರ್ಪು

ಯುರೋಪ್‌ನ ಮಾನವ ಹಕ್ಕುಗಳ ನ್ಯಾಯಾಲಯ ತೀರ್ಪು

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 13:32 IST
Last Updated 9 ಜುಲೈ 2025, 13:32 IST
   

ದಿ ಹೇಗ್‌: 2014ರಲ್ಲಿ ‘ಎಂಎಚ್‌ 17’ ವಿಮಾನವನ್ನು ಹೊಡೆದುರುಳಿಸುವ ಮೂಲಕ 298 ಜನರ ಸಾವಿಗೆ ಕಾರಣವಾದ ಕೃತ್ಯದಲ್ಲಿ ರಷ್ಯಾದ ಪಾತ್ರವಿತ್ತು ಎಂದು ಯುರೋಪ್‌ನ ಮಾನವ ಹಕ್ಕುಗಳ ನ್ಯಾಯಾಲಯ ತೀರ್ಪು ನೀಡಿದೆ.

ಉಕ್ರೇನ್ ಜೊತೆಗಿನ ಸಂಘರ್ಷದ ವೇಳೆಯೂ ರಷ್ಯಾ ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ನ್ಯಾಯಾಲಯ ಹೇಳಿದೆ.  

ಮಲೇಷ್ಯಾ ಏರ್‌ಲೈನ್ಸ್‌ನ ‘ಎಂಎಚ್‌ 17’ ವಿಮಾನ ಹೊಡೆದುರಳಿಸಿರುವುದು ಮತ್ತು ಉಕ್ರೇನ್‌ ಮಕ್ಕಳ ಅಪಹರಣ ಸೇರಿದಂತೆ ಯುದ್ಧ ಆರಂಭಗೊಂಡ ಬಳಿಕ ರಷ್ಯಾ ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಉಕ್ರೇನ್ ಮತ್ತು ನೆದರ್ಲೆಂಡ್ಸ್‌ ನಾಲ್ಕು ದೂರುಗಳನ್ನು ನೀಡಿದ್ದವು.

ADVERTISEMENT

ಈ ಪ್ರಕರಣಕ್ಕೆ ಸಂಬಂಧಿಸಿ ಅಂತರರಾಷ್ಟ್ರೀಯ ನ್ಯಾಯಾಲಯವೊಂದು ಮೊದಲ ಬಾರಿಗೆ ರಷ್ಯಾದ ವಿರುದ್ಧ  ತೀರ್ಪು ನೀಡಿದೆ. 

ಆಮ್‌ಸ್ಟರ್‌ಡ್ಯಾಂನಿಂದ ಕ್ವಾಲಾಲಂಪುರಕ್ಕೆ ತೆರಳುತ್ತಿದ್ದ ಎಂಎಚ್‌ 17 ವಿಮಾನವನ್ನು 2014ರ ಜುಲೈ 17ರಂದು ರಷ್ಯಾ ನಿರ್ಮಿತ ಕ್ಷಿಪಣಿಯಿಂದ ಹೊಡದುರುಳಿಸಲಾಗಿತ್ತು. ಈ ಕ್ಷಿಪಣಿಯನ್ನು ಬಂಡುಕೋರರ ಹಿಡಿತದಲ್ಲಿದ್ದ ಪೂರ್ವ ಉಕ್ರೇನ್‌ನಿಂದ ಉಡಾಯಿಸಲಾಗಿತ್ತು. 

ದುರಂತಕ್ಕೆ ರಷ್ಯಾ ಹೊಣೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಘಟನೆ(ಐಸಿಎಒ) ಮೇನಲ್ಲಿ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.