ADVERTISEMENT

ಟ್ರಂಪ್‌ ವಿರುದ್ಧ ವಾಗ್ದಂಡನೆ ಬೆಂಬಲಿಸಿದ್ದನ್ನು ಸಮರ್ಥಿಸಿಕೊಂಡ ರಿಪಬ್ಲಿಕನ್ ಸಂಸದ

ಏಜೆನ್ಸೀಸ್
Published 4 ಫೆಬ್ರುವರಿ 2021, 5:39 IST
Last Updated 4 ಫೆಬ್ರುವರಿ 2021, 5:39 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ಲ್ಯಾನ್ಸಿಂಗ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಮಂಡಿಸಲಾಗುತ್ತಿರುವ ವಾಗ್ದಂಡನೆಗೆ ಬೆಂಬಲ ನೀಡಿರುವುದನ್ನು ಮಿಚಿಗನ್‌ನಿಂದ ಆಯ್ಕೆಯಾಗಿರುವ ರಿಪಬ್ಲಿಕನ್‌ ಸಂಸದ ಪೀಟರ್‌ ಮೀಜರ್‌ ಸಮರ್ಥಿಸಿಕೊಂಡಿದ್ದಾರೆ.

ತಮ್ಮ ನಿರ್ಧಾರದ ಬಗ್ಗೆ ಕ್ಷೇತ್ರದ ಮತದಾರರಿಂದ ಟೀಕೆ ವ್ಯಕ್ತವಾಗಿದ್ದರೂ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ.

ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲುವು ಸಾಧಿಸಿರುವ ಪೀಟರ್‌ ಅವರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರು ಇರಾಕ್‌ನಲ್ಲಿ ನಡೆದ ಯುದ್ಧದಲ್ಲಿ ಭಾಗಿಯಾಗಿದ್ದರು.

ADVERTISEMENT

ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಕ್ಷೇತ್ರದ ಜನರನ್ನು ಉದ್ದೇಶಿಸಿ ಮಾತನಾಡಿದರು. 400ಕ್ಕೂ ಅಧಿಕ ಜನರು ಜೂಮ್‌, ಫೇಸ್‌ಬುಕ್‌ ಮೂಲಕ ಅವರ ಕಾರ್ಯಕ್ರಮವನ್ನು ವೀಕ್ಷಿಸಿದರು. ವಾಗ್ದಂಡನೆಗೆ ಬೆಂಬಲಿಸಿದ್ದನ್ನು ಹಲವರು ಪ್ರಶ್ನಿಸಿದರು.

‘ಕ್ಯಾಪಿಟಲ್‌ ಹಿಲ್‌ ಮೇಲೆ ದಾಳಿಗೆ ಆಗ ಅಧ್ಯಕ್ಷರಾಗಿದ್ದವರ ಪ್ರಚೋದನೆಯೇ ಕಾರಣವಾಗಿತ್ತು. ಸುಳ್ಳು ಸುದ್ದಿ ಹರಡುವ ಮೂಲಕ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ್ದರು. ಈ ಕೃತ್ಯಕ್ಕೆ ತಕ್ಕ ಪ್ರತಿಕ್ರಿಯೆ ನೀಡಲೇಬೇಕಾಗುತ್ತದೆ’ ಎಂದು ಪೀಟರ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.