ADVERTISEMENT

ನೀರಿನಲ್ಲಿ ಕೊರೊನಾ ವೈರಸ್‌!

ಪಿಟಿಐ
Published 20 ಏಪ್ರಿಲ್ 2020, 8:59 IST
Last Updated 20 ಏಪ್ರಿಲ್ 2020, 8:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ಯಾರಿಸ್‌: ಕುಡಿಯಲು ಅಲ್ಲದ, ಬಳಕೆಗೆ ಸೀಮಿತವಾದನೀರಿನಲ್ಲಿ ಕೊರೊನಾ ವೈರಸ್‌ನ ಅಲ್ಪ ಪ್ರಮಾಣದ ಕುರುಹುಗಳು ಕಂಡು ಬಂದಿರುವುದು ಸದ್ಯ ಬಯಲಾಗಿದೆ.

ಪ್ಯಾರಿಸ್‌ನಲ್ಲಿ ರಸ್ತೆಯನ್ನು ಶುಚಿಗೊಳಿಸಲು ಬಳಸಲಾಗುವ ನೀರಿನಲ್ಲಿ ಸಣ್ಣ ಪ್ರಮಾಣದಲ್ಲಿ ಕೊರೊನಾ ವೈರಸ್‌ಗಳು ಪತ್ತೆಯಾಗಿದೆ. ಆದರೆ, ಕುಡಿಯುವ ನೀರಿನಲ್ಲಿ ಅವುಗಳು ಪತ್ತೆಯಾಗಿಲ್ಲ ಎಂದು ಪ್ಯಾರಿಸ್‌ ನಗರದ ಅಧಿಕಾರಿ ತಿಳಿಸಿದ್ದಾರೆ.

ಪ್ಯಾರಿಸ್ ನೀರು ಪ್ರಾಧಿಕಾರ ಪ್ರಯೋಗಲಯವು ನಗರದ ಸುತ್ತಲೂ ಸಂಗ್ರಹಿಸಿದ 27 ಮಾದರಿಗಳ ಪೈಕಿ ನಾಲ್ಕರಲ್ಲಿ ಸಣ್ಣ ಪ್ರಮಾಣದ ವೈರಸ್ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ನೀರಿನ ಮೂಲವನ್ನು ಬಂದ್‌ ಮಾಡಲಾಗಿದೆ ಎಂದು ಪ್ಯಾರಿಸ್‌ನ ಪರಿಸರ ಅಧಿಕಾರಿ ಸೆಲಿಯಾ ಬ್ಲೇಯೆಲ್ ಎಂಬುವವರು ಸುದ್ದಿ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆ.

ADVERTISEMENT

ನಗರದ ಕುಡಿಯುವ ನೀರಿನ ಜಾಲವು ಸಂಪೂರ್ಣ ಸ್ವತಂತ್ರ ಮತ್ತು ಸಂರಕ್ಷಣೆಗೊಂಡಿದೆ. ಈ ನೀರಿನಲ್ಲಿ ಅಪಾಯವಿಲ್ಲ ಎಂದು ಪ್ಯಾರಿಸ್‌ ಬ್ಲೇಯೆಲ್‌ ತಿಳಿಸಿದ್ದಾರೆ.

ಪ್ಯಾರಿಸ್‌ನಲ್ಲಿ ಕುಡಿಯುವ ಉದ್ದೇಶಕ್ಕಲ್ಲದೇ, ಬಳಕೆಗಾಗಿ ನೀರನ್ನು ಸೀನ್‌ ನದಿ ಮತ್ತು ಅವರ್ಕ್‌ ಕಾಲುವೆಯಿಂದ ಪೂರೈಸಲಾಗುತ್ತಿದೆ. ಇದನ್ನು ನಗರದ ಶುಚಿ ಕಾರ್ಯಕ್ಕೆ, ಪ್ಯಾರಿಸ್‌ನ ಉದ್ಯಾನಗಳಲ್ಲಿ ಗಿಡಗಳಿಗಾಗಿ ಬಳಕೆ ಮಾಡಲಾಗುತ್ತದೆ. ಸದ್ಯ ಇದರ ಬಳಕೆಯನ್ನು ನಿರ್ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.