
ಪಿಟಿಐ
ಕಠ್ಮಂಡು: ಬಾಗ್ಮತಿ ಪ್ರಾಂತ್ಯದ ಹೆಟೌಡಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತವು 70 ಮೀಟರ್ ಉದ್ದದ ‘ಮಾಡ್ಯುಲರ್ ಸೇತುವೆ’ ಮತ್ತು ಉಡಾವಣಾ ಉಪಕರಣಗಳನ್ನು ನೇಪಾಳ ಸರ್ಕಾರಕ್ಕೆ ಹಸ್ತಾಂತರಿಸಿದೆ.
ಅಕ್ಟೋಬರ್‌ನಲ್ಲಿ ಸುರಿದ ಭಾರಿ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡಿರುವ ರಾಮೆಚಾಪ್ ಜಿಲ್ಲೆಗೆ ‘ಮಾಡ್ಯುಲರ್ ಸೇತುವೆ’ಯನ್ನು ಅಳವಡಿಸಲು ತಕ್ಷಣ ಕಳುಹಿಸಲಾಗಿದೆ.
ನೇಪಾಳದಲ್ಲಿರುವ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ ಅವರು ‘ಮಾಡ್ಯುಲರ್ ಸೇತುವೆ’ಯನ್ನು ನೇಪಾಳದ ಭೌತಿಕ ಮೂಲಸೌಕಾರ್ಯ ಮತ್ತು ಸಾರಿಗೆ ಸಚಿವ ಕುಲ್ಮನ್ ಘಿಸಿಂಗ್ ಅವರಿಗೆ ಹಸ್ತಾಂತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.