ADVERTISEMENT

ಮೊತ್ತ ಮೊದಲ ಬಾರಿಗೆ ಸೌದಿ ಅರೇಬಿಯಾದಲ್ಲಿ ಯೋಗ ಉತ್ಸವ ಆಚರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಜನವರಿ 2022, 16:12 IST
Last Updated 31 ಜನವರಿ 2022, 16:12 IST
ಚಿತ್ರ ಕೃಪೆ: Twitter @NoufMarwaai
ಚಿತ್ರ ಕೃಪೆ: Twitter @NoufMarwaai   

ಜೆಡ್ಡಾ: ಸೌದಿ ಅರೇಬಿಯಾದಲ್ಲಿ ಮೊತ್ತ ಮೊದಲ ಯೋಗ ಉತ್ಸವವನ್ನು ಆಚರಿಸಲಾಗಿದೆ.

ಶನಿವಾರದಂದು ಜೆಡ್ಡಾದ ಕಿಂಗ್ ಅಬ್ದುಲ್ಲಾ ಎಕನಾಮಿಕ್ ಸಿಟಿಯ ಜುಮಾನ್ ಪಾರ್ಕ್‌ನಲ್ಲಿ ಸಂಭ್ರಮ ಸಡಗರದಿಂದ ಯೋಗ ಹಬ್ಬವನ್ನು ಆಚರಿಸಲಾಯಿತು.

ಸೌದಿ ಅರೇಬಿಯಾ ಒಲಿಂಪಿಕ್ ಸಮಿತಿ, ಕ್ರೀಡಾ ಸಚಿವಾಲಯದ ಅಡಿಯಲ್ಲಿ ಸೌದಿ ಯೋಗ ಸಮಿತಿ (ಸೌದಿ ಯೋಗ ಫೆಡರೇಷನ್) ಯೋಗ ಉತ್ಸವವನ್ನು ಆಯೋಜಿಸಿತ್ತು.

ಯೋಗ ಶಿಕ್ಷಕಿ ನೌಫ್ ಅಲ್ ಮಾರ್ವಾಯಿ ಸಂಸ್ಥೆಯ ಅಧ್ಯಕ್ಷೆಯಾಗಿದ್ದು, ಯೋಗ ಚಟುವಟಿಕೆಗಳಲ್ಲಿ ಭಾಗವಹಿಸಲು ಜನರನ್ನು ಉತ್ತೇಜಿಸುವುದು ಹಾಗೂ ಯೋಗ ಶಿಕ್ಷಕರನ್ನು ಒಂದುಗೂಡಿಸುವುದು ಯೋಜನೆಯ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

ಸೌದಿ ಅರೇಬಿಯಾದ ದೊರೆಯನ್ನು ಶ್ಲಾಘಿಸಿರುವ ಅವರು, ಆರೋಗ್ಯ ಮತ್ತು ಯೋಗಕ್ಷೇಮ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಅಪಾರ ಬೆಂಬಲ ನೀಡಿದ್ದಾರೆ. ಇದು 2030ರ ದೂರದೃಷ್ಟಿಯ ಭಾಗವಾಗಿದ್ದು, ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.

ಸೌದಿ ಅರೇಬಿಯಾದ ಮೊದಲ ಯೋಗ ಉತ್ಸವವು ನೆಮ್ಮದಿಹಾಗೂ ಧ್ಯಾನದಿಂದ ತುಂಬಿದೆ. ದೇಶದ ಮೊದಲ ಯೋಗ ಉತ್ಸವದಲ್ಲಿ ಪಾಲ್ಗೊಳ್ಳಲು 1000ಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು ಎಂದು ಅವರು ತಿಳಿಸಿದರು.

ಈ ಹಿಂದೆ ಸೌದಿ ಅರೇಬಿಯಾದ ಮೊದಲ ಅಧಿಕೃತ ಯೋಗ ಶಿಕ್ಷಕಿ ಅಲ್ ಮಾರ್ವಾಯಿ ಅವರಿಗೆ ಭಾರತ ಸರ್ಕಾರವು 'ಪದ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಿತ್ತು. ಆಕೆ ಸೌದಿ ಅರೇಬಿಯಾದಲ್ಲಿ ಯೋಗ ಕಾನೂನುಬದ್ಧಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.