
ಪಿಟಿಐ
ಇಸ್ಲಾಮಾಬಾದ್: ಅಫ್ಗನಿಸ್ತಾನದಿಂದ ಡ್ರೋನ್ ದಾಳಿ ಮುಂದುವರಿದ ಕಾರಣ ಪಾಕಿಸ್ತಾನದ ಗಡಿ ಜಿಲ್ಲೆಗಳಲ್ಲಿ ಶಾಲಾ– ಕಾಲೇಜುಗಳನ್ನು ಬಂದ್ ಮಾಡಲಾಗಿದೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶಾಲೆಯೊಂದರ ಮೇಲೆ ಡ್ರೋನ್ ದಾಳಿ ನಡೆದಿದೆ. ಶಾಲಾ ಕಟ್ಟಡಕ್ಕೆ ಡ್ರೋನ್ ಅಪ್ಪಳಿಸಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ವರದಿಯಾಗಿಲ್ಲ. ಘಟನೆ ಬಳಿಕ ಸ್ಥಳದಲ್ಲಿ ಭಾರಿ ಭದ್ರತೆ ಒದಗಿಸಲಾಗಿದೆ ಎನ್ನಲಾಗಿದೆ.
ಮೊಹಮಂದ್‌ನಲ್ಲಿ 54, ಘಲಾನೈನಲ್ಲಿ 1, ಬೈಜೈನಲ್ಲಿ 33, ಸಫಿಯಲ್ಲಿ 10 ಹಾಗೂ ಖ್ವೆಜೈನಲ್ಲಿ 2 ಶಾಲೆಗಳನ್ನು ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉತ್ತರ ವಜೀರಿಸ್ತಾನದಲ್ಲಿ 33, ಬಾಜೌರ್‌ನಲ್ಲಿ 39 ಶಾಲೆಗಳಿಗೂ ಬೀಗ ಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.