ADVERTISEMENT

ಮಾಸ್ಕೊ ಮೇಲೆ ಡ್ರೋನ್ ದಾಳಿ; ಆಕಾಶದಲ್ಲೇ ಸುತ್ತಿದ ಕನಿಮೋಳಿ ನೇತೃತ್ವದ ನಿಯೋಗ

ಪಿಟಿಐ
Published 23 ಮೇ 2025, 14:27 IST
Last Updated 23 ಮೇ 2025, 14:27 IST
<div class="paragraphs"><p>ಕನಿಮೋಳಿ ನೇತೃತ್ವದ ನಿಯೋಗ</p></div>

ಕನಿಮೋಳಿ ನೇತೃತ್ವದ ನಿಯೋಗ

   

(ಪಿಟಿಐ ಚಿತ್ರ)

ಮಾಸ್ಕೊ: ರಷ್ಯಾದ ಮಾಸ್ಕೊ ನಗರದ ಮೇಲೆ ನಡೆದ ಡ್ರೋನ್ ದಾಳಿಯಿಂದಾಗಿ ಡಿಎಂಕೆ ನಾಯಕಿ ಕನಿಮೋಳಿ ನೇತೃತ್ವದ ಭಾರತೀಯ ಸಂಸದರ ನಿಯೋಗವನ್ನು ಕರೆದೊಯ್ಯುತ್ತಿದ್ದ ವಿಮಾನವು ಸ್ವಲ್ಪ ಸಮಯದವರೆಗೆ ಆಕಾಶದಲ್ಲೇ ಸುತ್ತಾಡಬೇಕಾಯಿತು ಎಂದು ವರದಿಯಾಗಿದೆ.

ADVERTISEMENT

ಬಳಿಕ ಭಾರತೀಯ ಸಂಸದರನ್ನು ಒಳಗೊಂಡ ನಿಯೋಗವನ್ನು ಹೊತ್ಯೊಯುತ್ತಿದ್ದ ವಿಮಾನವು ಸುರಕ್ಷಿತವಾಗಿ ಇಳಿಯಿತು.

ಪಾಕಿಸ್ತಾನದ ಭಯೋತ್ಪಾದನೆ ಚಟುವಟಿಕೆ ಮತ್ತು ಆಪರೇಷನ್ ಸಿಂಧೂರ ಕುರಿತು ವಿವಿಧ ರಾಷ್ಟ್ರಗಳಿಗೆ ಮಾಹಿತಿ ನೀಡಲು ಕನಿಮೋಳಿ ನೇತೃತ್ವದ ನಿಯೋಗವು ರಷ್ಯಾಕ್ಕೆ ಪ್ರಯಾಣ ಬೆಳೆಸಿತ್ತು.

ಮಾಸ್ಕೊ ನಗರವನ್ನು ಗುರಿಯಾಗಿಸಿ ಉಕ್ರೇನ್ ಡ್ರೋನ್ ದಾಳಿ ನಡೆಸಿತ್ತು. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಗಳನ್ನು ಮುಚ್ಚುವಂತೆ ನಿರ್ದೇಶಿಸಲಾಗಿದೆ. ಕನಿಮೋಳಿ ನೇತೃತ್ವದ ಭಾರತೀಯ ಸಂಸದೀಯ ನಿಯೋಗವನ್ನು ಹೊತ್ತ ವಿಮಾನ ಸುಮಾರು 40 ನಿಮಿಷ ತಂಡವಾಗಿ ಡೊಮೊಡೆದೊವೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.