ಮೌಂಟ್ ಎವರೆಸ್ಟ್
ಕಠ್ಮಂಡು: ಈ ಬಾರಿಯ ಮೌಂಟ್ ಎವರೆಸ್ಟ್ ಶಿಖರ ಏರಲು 53 ದೇಶಗಳ 402 ಪರ್ವತಾರೋಹಿಗಳಿಗೆ ಅನುಮತಿ ನೀಡಲಾಗಿದೆ. ಇದರಲ್ಲಿ 74 ಮಂದಿ ಮಹಿಳೆಯರೂ ಸೇರಿದ್ದಾರೆ ಎಂದು ನೇಪಾಳದ ಪ್ರವಾಸೋದ್ಯಮ ಇಲಾಖೆ ಹೇಳಿದೆ.
ಈವರೆಗೆ ಇಲಾಖೆಯು 8,848.86 ಮೀಟರ್ ಎತ್ತರದ ಶಿಖರವೇರಲು 41 ಬಾರಿ ಅವಕಾಶ ನೀಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 75 ಮಹಿಳೆಯರು, 330 ಪುರುಷರು ಸೇರಿ 414 ಮಂದಿಗೆ ಶಿಖರ ಏರಲು ಅವಕಾಶ ನೀಡಲಾಗಿತ್ತು ಎಂದು ಹೇಳಿದೆ.
ಈ ವರ್ಷ ನೇಪಾಳದ ವಿವಿಧ ಶಿಖರಗಳನ್ನು ಏರಲು ನೀಡಿದ್ದ ಅನುಮತಿಯಲ್ಲಿ ಒಟ್ಟು ₹68.4 ಕೋಟಿ ಗೌರವ ಧನ ಸಂಗ್ರಹವಾಗಿದೆ. ಅದರಲ್ಲಿ ಮೌಂಟ್ ಎವರೆಸ್ಟ್ ಮಾತ್ರ ಏರಲು ನೀಡಿದ ಗೌರವ ಧನದ ಸಂಗ್ರಹ ₹59.5 ಕೋಟಿ ಆಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೇಪಾಳಿಗರು ಮತ್ತು ವಿದೇಶಿಗರು ಸೇರಿ ಒಟ್ಟು 8 ಸಾವಿರ ಪರ್ವತಾರೋಹಿಗಳು ಈವರೆಗೆ ಮೌಂಟ್ ಎವರೆಸ್ಟ್ ಶಿಖರದ ಪರ್ವತಾರೋಹಣವನ್ನು ಕೈಗೊಂಡಿದ್ದಾರೆ ಎಂದು ಇಲಾಖೆ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.