ADVERTISEMENT

ಭಾರತಕ್ಕೆ ಹಸ್ತಾಂತರ: ಮುಂಬೈ ದಾಳಿ ಪ್ರಕರಣದ ಪ್ರಮುಖ ಸಂಚುಕೋರ ರಾಣಾ ವಿರೋಧ

ಪಿಟಿಐ
Published 5 ಫೆಬ್ರುವರಿ 2021, 6:45 IST
Last Updated 5 ಫೆಬ್ರುವರಿ 2021, 6:45 IST
ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹಾವುರ್‌ ಹುಸೇನ್‌ ರಾಣಾ
ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹಾವುರ್‌ ಹುಸೇನ್‌ ರಾಣಾ   

ವಾಷಿಂಗ್ಟನ್‌: 2008ರ ಮುಂಬೈ ದಾಳಿ ಸಂಚುಕೋರ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತಹಾವುರ್‌ ಹುಸೇನ್‌ ರಾಣಾ, ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾನೆ.

ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ವಿರೋಧಿಸಿ ಆತನ ಪರ ವಕೀಲ ಜಾಕ್ವೆಲಿನ್‌ ಚೆಲೊನಿಯನ್ ಅವರು ಕಳೆದ ವಾರ ಲಾಸ್‌ಏಂಜಲೀಸ್‌ನ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

‘ಈಗಾಗಲೇ ರಾಣಾನನ್ನು ಅಪರಾಧಗಳಿಂದ ಖುಲಾಸೆಗೊಳಿಸಲಾಗಿದೆ. ಅಮೆರಿಕ – ಭಾರತ ಹಸ್ತಾಂತರ ಒಪ್ಪಂದದ 6ನೇ ಪರಿಚ್ಛೇದದ ಪ್ರಕಾರ, ರಾಣಾನನ್ನು ಹಸ್ತಾಂತರಿಸುವುದನ್ನು ನಿರ್ಬಂಧಿಸಲಾಗಿದೆ. 9ನೇ ಪರಿಚ್ಛೇದದ ಪ್ರಕಾರ ಹಸ್ತಾಂತರಿಸಲು ರಾಣಾ ಮಾಡಿರಬಹುದಾದ ಸಂಭವನೀಯ ಅಪರಾಧಗಳ ಸಾಕ್ಷ್ಯವನ್ನು ಒದಗಿಸಿಲ್ಲ‘ಎಂದು ವಕೀಲರು ವಾದ ಮಂಡಿಸಿದ್ದರು.

ADVERTISEMENT

ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಅಮೆರಿಕ ಸರ್ಕಾರ ಶೀಘ್ರದಲ್ಲೇ ಗೊತ್ತುವಳಿ ಮಂಡಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.