ADVERTISEMENT

ನನ್ನ ಜೀವಕ್ಕೆ ಬೆದರಿಕೆ ಇದೆ: ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್

ಪಿಟಿಐ
Published 1 ಏಪ್ರಿಲ್ 2022, 21:08 IST
Last Updated 1 ಏಪ್ರಿಲ್ 2022, 21:08 IST
   

ಇಸ್ಲಾಮಾಬಾದ್‌: ‘ನನ್ನ ಜೀವಕ್ಕೆ ಅಪಾಯ ಇದೆ. ಈ ಕುರಿತು ನನಗೆ ವಿಶ್ವಾಸಾರ್ಹ ಮಾಹಿತಿ ಇದೆ. ಇದಾವುದಕ್ಕೂ ನಾನು ಅಂಜುವುದಿಲ್ಲ. ಸ್ವತಂತ್ರ ಹಾಗೂ ಪ್ರಜಾತಾಂತ್ರಿಕ ಪಾಕಿಸ್ತಾನಕ್ಕಾಗಿ ನನ್ನ ಹೋರಾಟ ಮುಂದುವರಿಸುವೆ’ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಶುಕ್ರವಾರ ಹೇಳಿದ್ದಾರೆ.

‘ಎಆರ್‌ವೈ ನ್ಯೂಸ್‌’ ಚಾನೆಲ್‌ಗೆ ಅವರು ಸಂದರ್ಶನ ನೀಡಿದ್ದಾರೆ.

‘ಅವಿಶ್ವಾಸ ನಿರ್ಣಯ ಎದುರಿಸಬೇಕು ಇಲ್ಲವೇ ರಾಜೀನಾಮೆ ನೀಡಬೇಕು ಅಥವಾ ಚುನಾವಣೆ ಘೋಷಿಸಬೇಕು ಎಂಬ ಮೂರು ಆಯ್ಕೆಗಳನ್ನು ದೇಶದ ಮಿಲಿಟರಿ ನನಗೆ ನೀಡಿದೆ’ ಎಂದೂ ಹೇಳಿದ್ದಾರೆ.

ADVERTISEMENT

‘ನನ್ನ ಜೀವಕ್ಕೆ ಬೆದರಿಕೆ ಮಾತ್ರ ಇಲ್ಲ. ವಿದೇಶಗಳ ಕೈಗೊಂಬೆಯಂತೆ ವರ್ತಿಸುತ್ತಿರುವ ವಿರೋಧ ಪಕ್ಷಗಳ ನಾಯಕರು ಕೂಡ ನನ್ನ ತೇಜೋವಧೆ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಆಕ್ರೋಶ: ‘ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡಲು ರಷ್ಯಾಕ್ಕೆ ಭೇಟಿ ನೀಡಿದ್ದೆ. ಈ ಕಾರಣಕ್ಕೆ, ಭಾರತವನ್ನು ಬೆಂಬಲಿಸುವ ‘ಶಕ್ತಿಶಾಲಿ ರಾಷ್ಟ್ರ’ವು ಪಾಕಿಸ್ತಾನದ ಮೇಲೆ ಕೋಪಗೊಂಡಿದೆ’ ಎಂದು ಹೇಳುವ ಮೂಲಕ ಇಮ್ರಾನ್ ಅವರು ಅಮೆರಿಕ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.

ಇದಕ್ಕೂ ಮುನ್ನ ಮಾತನಾಡಿದ ಅವರು, ‘ನಾನು ರಷ್ಯಾಕ್ಕೆ ಭೇಟಿ ನೀಡಿ
ದ್ದನ್ನು ವಿರೊಧಿಸುವ ಪ್ರಬಲ ದೇಶವು, ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ತನ್ನ ಮಿತ್ರರಾಷ್ಟ್ರ ಭಾರತವನ್ನು ಬೆಂಬಲಿಸುತ್ತಿದೆ’ ಎಂದು ಅಮೆರಿಕ ವಿರುದ್ಧ ಕಿಡಿಕಾರಿದರು.

ಸಮನ್ಸ್: ‘ದೇಶದ ಆಂತರಿಕ ವಿಷಯಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡುತ್ತಿದೆ’ ಎಂದು ಆರೋಪಿಸಿ, ಅಮೆರಿಕದ ಹಿರಿಯ ರಾಜತಾಂತ್ರಿಕ ಅಧಿಕಾರಿಯೊಬ್ಬರಿಗೆ ಪಾಕಿಸ್ತಾನ ಸಮನ್ಸ್‌ ನೀಡಿ, ಪ್ರತಿಭಟನೆ ದಾಖಲಿಸಿತು ಎಂದು ಮಾಧ್ಯಮಗಳು ಶುಕ್ರವಾರ ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.