ಯಾಂಗೋನ್ (ಮ್ಯಾನ್ಮಾರ್): ಅಂತರರಾಷ್ಟ್ರಿಯ ಮಾದಕ ವಸ್ತು ಸೇವನೆ ಮತ್ತು ಸಾಗಣೆ ವಿರೋಧಿ ದಿನಾಚರಣೆಯ ಅಂಗವಾಗಿ ಮ್ಯಾನ್ಮಾರ್‌ನ ಪ್ರಮುಖ ನಗರಗಳಲ್ಲಿ ₹2,570 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಗುರುವಾರ ನಾಶಪಡಿಸಲಾಗಿದೆ.
ದೇಶದ ಬೃಹತ್ ನಗರ ಯಾಂಗೋನ್‌ನಲ್ಲಿ ₹ 1,000 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಸುಡಲಾಗಿದೆ. ಮಾದಕವಸ್ತುಗಳನ್ನು ಉತ್ಪಾದಿಸುವ ಪ್ರಮುಖ ಸ್ಥಳಗಳ ಬಳಿಯೇ ಅವುಗಳನ್ನು ನಾಶಪಡಿಸುವ ಪ್ರಕ್ರಿಯೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗ್ನೇಯ ಏಷ್ಯಾದ ಟ್ರಯಾಂಗಲ್ ಪ್ರದೇಶ ಮತ್ತು ಮ್ಯಾನ್ಮಾರ್‌ನ ಈಸ್ಟರ್ನ್ ಶಾನ್ ರಾಜ್ಯದಿಂದ ಮೆಥಂಫೆಟಾಮಿನ್ ಎಂಬ ಮಾದಕವಸ್ತುವಿನ ತಯಾರಿಕೆ ಮತ್ತು ಪೂರೈಕೆ ಹೆಚ್ಚುತ್ತಿರುವ ಬಗ್ಗೆ ವಿಶ್ವಸಂಸ್ಥೆಯ ತಜ್ಞರು ಎಚ್ಚರಿಸಿದ ಒಂದು ತಿಂಗಳೊಳಗೆ ಈ ಪ್ರಕ್ರಿಯೆ ನಡೆದಿದೆ.
ಹಲವಾರು ವರ್ಷಗಳಿಂದ ಪೂರ್ವ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿನ ಅಕ್ರಮ ಮಾದಕವಸ್ತುಗಳ ಪೂರೈಕೆಯ ಪ್ರಮುಖ ಮೂಲ ಮ್ಯಾನ್ಮಾರ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.