
ಬ್ಯಾಂಕಾಕ್: ಮ್ಯಾನ್ಮಾರ್‌ನಲ್ಲಿ ಐದು ವರ್ಷಗಳ ಬಳಿಕ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಮೊದಲ ಹಂತದ ಚುನಾವಣೆಯು ಡಿಸೆಂಬರ್ 28ರಂದು ನಡೆಯಲಿದೆ.
ಸೇನೆಯು ಈ ಚುನಾವಣೆಯನ್ನು ಬಹು ಪಕ್ಷೀಯ ಪ್ರಜಾಪ್ರಭುತ್ವಕ್ಕೆ ಮರಳುವಿಕೆ ಎಂದು ಹೇಳಿದೆ. ದೇಶದ ವಿವಿಧ ಭಾಗಗಳಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಎರಡನೇ ಹಂತ ಜನವರಿ 11ರಂದು ಮತ್ತು ಮೂರನೇ ಹಂತ ಜನವರಿ 25ರಂದು ನಡೆಯಲಿದೆ.
2021ರಲ್ಲಿ ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ ಸೇನೆಯೂ ಅಧಿಕಾರ ವಹಿಸಿಕೊಂಡಿದ್ದು, ಜನ ವಿರೋಧಕ್ಕೆ ಕಾರಣವಾಯಿತು. ಅದು ಮುಂದೆ ಅಂತರ್ಯುದ್ಧವಾಗಿ ಬೆಳೆಯಿತು. ಇದರಿಂದ ಅನೇಕ ಪ್ರದೇಶಗಳಲ್ಲಿ ಚುನಾವಣೆ ನಡೆಸುವುದು ಕಷ್ಟವಾಗಿ ಪರಿಣಮಿಸಿತ್ತು.
ಮತದಾನವು ಮುಕ್ತ ಅಥವಾ ನ್ಯಾಯಯುತವಾಗಿರುವುದಿಲ್ಲ ಮತ್ತು ಅಧಿಕಾರವು ಮಿಲಿಟರಿ ನಾಯಕರ ಕೈಯಲ್ಲಿ ಉಳಿಯುವ ಸಾಧ್ಯತೆಯಿದೆ ಎಂದು ಮಾನವ ಹಕ್ಕುಗಳ ಗುಂಪು ಮತ್ತು ಇತರ ಸಂಘಟನೆಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.