ನೈಪಿಡಾವ್: ಮ್ಯಾನ್ಮಾರ್‌ನಲ್ಲಿ ಮೂರು ಹಂತಗಳಲ್ಲಿ ಚುನಾವಣೆಗಳನ್ನು ನಡೆಸಲು ಸಿದ್ಧತೆ ನಡೆಸಲಾಗಿದ್ದು, ಜನವರಿ ಅಂತ್ಯದೊಳಗೆ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ ಎಂದು ಅಲ್ಲಿನ ಚುನಾವಣಾ ಆಯೋಗ ತಿಳಿಸಿದೆ.
2021ರಲ್ಲಿ ಆಂಗ್ ಸಾನ್ ಸೂ ಕಿ ನೇತೃತ್ವದ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿದ್ದ ಸೇನೆಯು, ಚುನಾವಣೆಯಲ್ಲಿ ಅಕ್ರಮ ನಡೆದಿರುವುದಾಗಿ ಆಧಾರರಹಿತ ಆರೋಪ ಮಾಡಿತ್ತು.
ರಾಜಧಾನಿ ನೈಪಿಡಾವ್‌ನಲ್ಲಿ ಚುನಾವಣಾ ಆಯೋಗವು ಗುರುವಾರ ಮೂರು ಗಂಟೆ ಸುದ್ದಿಗೋಷ್ಠಿ ನಡೆಸಿತು. ಕಳೆದ ಚುನಾವಣೆಯಲ್ಲಿ ಬಹುಮತ ಪಡೆದಿದ್ದ ಆಂಗ್ ಸಾನ್ ಸೂ ಕಿ ಹಾಗೂ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ಕುರಿತು ಒಮ್ಮೆಯೂ ಉಲ್ಲೇಖಿಸಲಿಲ್ಲ.
‘ರಾಷ್ಟ್ರಮಟ್ಟದ ಆರು ರಾಜಕೀಯ ಪಕ್ಷಗಳು ಹಾಗೂ 51 ಪ್ರಾದೇಶಿಕ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಲಿವೆ. ಮತದಾನವು ಮೂರು ಹಂತಗಳಲ್ಲಿ ನಡೆಯಲಿದ್ದು, ಪ್ರತಿಯೊಂದರ ನಡುವೆ ಎರಡು ವಾರಗಳ ಅಂತರವಿರಲಿದೆ’ ಎಂದು ಚುನಾವಣಾ ಆಯೋಗದ ಸದಸ್ಯ ಖಿನ್ ಮಾಂಗ್ ಓ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.