ADVERTISEMENT

ಕ್ಷಿಪಣಿಗೆ ಗುವಾಮ್‌ ತಲುಪುವ ಸಾಮರ್ಥ್ಯ ಇದೆ: ಉತ್ತರ ಕೊರಿಯಾ

ಏಜೆನ್ಸೀಸ್
Published 31 ಜನವರಿ 2022, 14:20 IST
Last Updated 31 ಜನವರಿ 2022, 14:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸೋಲ್‌: ತಾನು ಪರೀಕ್ಷಿಸಿರುವ ಖಂಡಾಂತರ ಕ್ಷಿಪಣಿಯು ಶಕ್ತಿಶಾಲಿಯಾಗಿದ್ದು,ಇದು ಅಮೆರಿಕದ ಗುವಾಮ್ ಪ್ರದೇಶವನ್ನು ತಲುಪುವ ಸಾಮರ್ಥ್ಯ ಹೊಂದಿದೆ ಎಂದು ಉತ್ತರ ಕೊರಿಯಾ ಸೋಮವಾರ ತಿಳಿಸಿದೆ.

ಉತ್ತರ ಕೊರಿಯಾಭಾನುವಾರ ಕ್ಷಿಪಣಿಯೊಂದನ್ನು ಪರೀಕ್ಷಿಸಿದ್ದು, ಇದು ಇತ್ತೀಚಿನ ವರ್ಷಗಳಲ್ಲಿ ಆ ದೇಶವು ಪರೀಕ್ಷಿಸಿದ ಅತ್ಯಂತ ಶಕ್ತಿಶಾಲಿ ಕ್ಷಿಪಣಿ ಎಂದು ತಜ್ಞರು ಅಂದಾಜಿಸಿದ್ದಾರೆ.

ಸಾಂಕ್ರಾಮಿಕದ ಸಂಕಷ್ಟ, ಅಮೆರಿಕದ ನಿರ್ಬಂಧಗಳಿಂದ ಕಂಗೆಟ್ಟಿರುವ ಉತ್ತರ ಕೊರಿಯಾ ಅದರಿಂದ ಹೊರಬರುವುದು ಅಥವಾ ಪರಮಾಣು ರಾಷ್ಟ್ರ ಎಂದು ಅಂತರರಾಷ್ಟ್ರೀಯ ಮನ್ನಣೆ ಗಳಿಸುವ ಉದ್ದೇಶದಿಂದ ಕ್ಷಿಪಣಿ ಪರೀಕ್ಷೆ ನಡೆಸಿದೆ ಎಂದು ಕೆಲವು ತಜ್ಞರು ಹೇಳಿದ್ದಾರೆ.

ADVERTISEMENT

ಭಾನುವಾರ ನಡೆಸಿರುವ ಕ್ಷಿಪಣಿ ಪರೀಕ್ಷೆ ಬಳಿಕ ಉತ್ತರ ಕೊರಿಯಾ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಿದರೆ ಅದು ಇನ್ನಷ್ಟು ದೊಡ್ಡ ಪರೀಕ್ಷೆಗಳನ್ನು ನಡೆಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.