ADVERTISEMENT

ಇಸ್ರೇಲ್‌: ಯದ್‌ ವಶೇಮ್ ಸ್ಮಾರಕ್ಕೆ ಮೋದಿ ಗೌರವ

ಪಿಟಿಐ
Published 26 ಫೆಬ್ರುವರಿ 2026, 16:15 IST
Last Updated 26 ಫೆಬ್ರುವರಿ 2026, 16:15 IST
 ಜೆರುಸಲೇಮ್‌ನಲ್ಲಿರುವ ಯದ್‌ ವಶೇಮ್ ಹತ್ಯಾಕಾಂಡ ಸ್ಮಾರಕಕ್ಕೆ  ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭೇಟಿ ನೀಡಿ, ಗೌರವ ಸಲ್ಲಿಸಿದರು –ಎಪಿ/ಪಿಟಿಐ ಚಿತ್ರ 
 ಜೆರುಸಲೇಮ್‌ನಲ್ಲಿರುವ ಯದ್‌ ವಶೇಮ್ ಹತ್ಯಾಕಾಂಡ ಸ್ಮಾರಕಕ್ಕೆ  ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭೇಟಿ ನೀಡಿ, ಗೌರವ ಸಲ್ಲಿಸಿದರು –ಎಪಿ/ಪಿಟಿಐ ಚಿತ್ರ    

ಜೆರುಸಲೇಮ್: ಇಸ್ರೇಲ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ಯದ್‌ ವಶೇಮ್ ಸ್ಮಾರಕಕ್ಕೆ ಭೇಟಿ ನೀಡಿ, ಹತ್ಯಾಕಾಂಡ ಸಂತ್ರಸ್ತರಿಗೆ ಗುರುವಾರ ಗೌರವ ಸಲ್ಲಿಸಿದರು.

ಮೋದಿ ಅವರು ಸ್ಮಾರಕಕ್ಕೆ ಹೂಗುಚ್ಛ ಹಾಗೂ ಮೃತರ ಗೌರವಾರ್ಥ ಶಿಲೆಯೊಂದನ್ನು ಇರಿಸಿ, ನಮಿಸಿದರು. ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಈ ವೇಳೆ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಉಭಯ ನಾಯಕರು, ಹತ್ಯಾಕಾಂಡದಲ್ಲಿ ಹತರಾದವರ ಹೆಸರುಗಳಿರುವ ‘ಹಾಲ್‌ ಆಫ್‌ ನೇಮ್ಸ್‌’ಗೆ ಭೇಟಿ ನೀಡಿದರು. ಪತ್ನಿ ಸಾರಾ ಅವರ ಸಂಬಂಧಿಕರು ಈ ಹತ್ಯಾಕಾಂಡದಲ್ಲಿ ಮೃತಪಟ್ಟ ಬಗ್ಗೆ ಮಾಹಿತಿ ನೀಡಿದ ನೆತನ್ಯಾಹು, ಅವರ ಹೆಸರುಗಳನ್ನು ಮೋದಿ ಅವರಿಗೆ ತೋರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.