ADVERTISEMENT

ಹೊಸ ಗ್ರಹ ಪತ್ತೆ

ಪಿಟಿಐ
Published 8 ಜುಲೈ 2019, 20:15 IST
Last Updated 8 ಜುಲೈ 2019, 20:15 IST

ವಾಷಿಂಗ್ಟನ್‌: ಭೂಮಿ ಮತ್ತು ನೆಪ್ಚ್ಯೂನ್‌ ಗ್ರಹಗಳ ನಡುವಿನ ಗಾತ್ರದಲ್ಲಿರುವ ಹೊಸ ಗ್ರಹವೊಂದನ್ನು ಸ್ಪಿಟ್ಜರ್‌ ಹಾಗೂ ಹಬಲ್‌ ಸ್ಪೇಸ್‌ ಟೆಲಿಸ್ಕೋಪ್‌ ಮೂಲಕ ಗುರುತಿಸಿರುವ ನಾಸಾ, ಇದೇ ಮೊದಲ ಬಾರಿಗೆ ಗ್ರಹವೊಂದರ ವಿಸ್ತೃತ ರಾಸಾಯನಿಕ ಗುಣವನ್ನು ಪತ್ತೆಹಚ್ಚಿದೆ.

‘ಇಂತಹ ಗ್ರಹ ನಮ್ಮ ಸೌರವ್ಯೂಹದಲ್ಲಿ ಕಾಣಸಿಗುವುದಿಲ್ಲ. ಆದರೆ ಇತರೆ ನಕ್ಷತ್ರಗಳ ಸುತ್ತಮುತ್ತ ಇಂತಹ ಗ್ರಹಗಳು ಸಾಮಾನ್ಯ’ ಎಂದು ಪ್ರಕಟಣೆಯಲ್ಲಿ ನಾಸಾ ತಿಳಿಸಿದೆ.12.6 ದ್ರವ್ಯರಾಶಿಯನ್ನು ಹೊಂದಿರುವ ಈ ಗ್ರಹಕ್ಕೆ ಗ್ಲೈಸ್‌ 3470 ಬಿ ಎಂದು ಹೆಸರಿಸಲಾಗಿದ್ದು,ಜಲಜನಕ ಮತ್ತು ಹೀಲಿಯಂ ವಾತಾವರಣವನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT