ADVERTISEMENT

ಅಮೆರಿಕದ ಮೇರಿಲ್ಯಾಂಡ್ ವಿವಿಯಿಂದ ಹಿಂದಿ ಕಲಿಕೆ ವಿಡಿಯೊ ಸರಣಿ| ನಾಸಾದಿಂದ ನೆರವು

ಭಾರತದ ಪಾರಂಪರಿಕ ತಾಣಗಳ ಪರಿಚಯ

ಪಿಟಿಐ
Published 18 ಜೂನ್ 2019, 19:05 IST
Last Updated 18 ಜೂನ್ 2019, 19:05 IST
   

ವಾಷಿಂಗ್ಟನ್: ವಿಜ್ಞಾನ ಮತ್ತು ತಂತ್ರಜ್ಞಾನ ಆಯಾಮಗಳ ಮೂಲಕಹಿಂದಿ ಭಾಷೆಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲಿಸುವ ಉದ್ದೇಶದಿಂದಅಮೆರಿಕದ ಮೇರಿಲ್ಯಾಂಡ್ ವಿಶ್ವವಿದ್ಯಾಲಯ ವಿಡಿಯೊ ಸರಣಿ ಮಾಡುತ್ತಿದ್ದು, ನಾಸಾ ಇದಕ್ಕೆ ಆರ್ಥಿಕ ನೆರವು ನೀಡುತ್ತಿದೆ.

ಭಾರತದಲ್ಲಿನ ಪ್ರಸಿದ್ಧ ಪಾರಂಪರಿಕ ತಾಣಗಳ ಬಗ್ಗೆ ಈ ಸರಣಿಯಲ್ಲಿ ವಿವರ ನೀಡಲಾಗಿದೆ.

ಅಮೆರ್ ಕೋಟೆ ಅರಮನೆ, ಜೈಪುರದಲ್ಲಿನ ಹವಾ ಮಹಲ್,ದೆಹಲಿಯಲ್ಲಿರುವ ತುಕ್ಕು ನಿರೋಧಕ ಕಬ್ಬಿಣದ ಸ್ತಂಭ,ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಕುತುಬ್ ಮಿನಾರ್‌, ಜಾಗತಿಕವಾಗಿ ಪ್ರಸಿದ್ಧವಾದ ಜೈಪುರ ಕೃತಕ ಕಾಲು ತಯಾರಿಕಾ ಸಂಸ್ಥೆಯ ಕೇಂದ್ರ ಕಚೇರಿ ಸೇರಿದಂತೆ ಹಲವು ತಾಣಗಳನ್ನು ಪರಿಚಯಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.