ADVERTISEMENT

ಉಕ್ರೇನ್‌ನ ವಾಯು ರಕ್ಷಣಾ ವ್ಯವಸ್ಥೆಯಿಂದ ಪೋಲೆಂಡ್‌ನಲ್ಲಿ ಕ್ಷಿಪಣಿ ಸ್ಫೋಟ: ನ್ಯಾಟೊ

ಏಜೆನ್ಸೀಸ್
Published 17 ನವೆಂಬರ್ 2022, 3:18 IST
Last Updated 17 ನವೆಂಬರ್ 2022, 3:18 IST
   

ಕೀವ್: ಉಕ್ರೇನ್‌ನಲ್ಲಿ ರಷ್ಯಾ ನಡೆಸುತ್ತಿರುವ ಆಕ್ರಮಣವು ಅಪಾಯಕಾರಿ ತಿರುವು ಪಡೆಯುತ್ತಿರುವ ಬಗ್ಗೆ ಪಾಶ್ಚಿಮಾತ್ಯ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಪೋಲೆಂಡ್‌ನಲ್ಲಿ ಸಂಭವಿಸಿದ ಕ್ಷಿಪಣಿ ಸ್ಫೋಟವು ಆಕಸ್ಮಿಕವಾಗಿದ್ದು, ಉಕ್ರೇನ್‌ನ ವೈಮಾನಿಕ ರಕ್ಷಣಾ ದಾಳಿಯತ್ತ ಬೊಟ್ಟು ಮಾಡಿವೆ.

ಈ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ರಷ್ಯಾದತ್ತ ಆರೋಪ ಮಾಡಿದ್ದರು. ಆದರೆ, ಕ್ಷಿಪಣಿ ಉಕ್ರೇನ್‌ನಿಂದ ಹಾರಿಸಿರಬಹುದು ಎಂಬ ಪೋಲೆಂಡ್‌ನ ವಾದವನ್ನು ಅಮೆರಿಕ ಮತ್ತು ನ್ಯಾಟೊ ದೃಢಪಡಿಸಿವೆ.

ಉಕ್ರೇನ್‌ನ ಜನವಸತಿ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ರಷ್ಯಾ ಸಾಮೂಹಿಕ ಬಾಂಬ್ ದಾಳಿ ನಡೆಸುತ್ತಿದ್ದ ಸಂದರ್ಭ ನ್ಯಾಟೊ ಸದಸ್ಯ ರಾಷ್ಟ್ರ ಪೋಲೆಂಡ್‌ನ ಉಕ್ರೇನ್‌ ಗಡಿಯಲ್ಲಿರುವ ಹಳ್ಳಿಗೆ ಮಂಗಳವಾರ ಕ್ಷಿಪಣಿ ಅಪ್ಪಳಿಸಿತ್ತು. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು.

ADVERTISEMENT

ಪೋಲೆಂಡ್‌ನ ಶವಾಡೂಫ್(Przewodow) ಗ್ರಾಮದಲ್ಲಿ ಸಂಭವಿಸಿದ ಸಂಭವಿಸಿದ ಸ್ಪೋಟವು ರಷ್ಯಾ ದಾಳಿ ಹಿಮ್ಮೆಟ್ಟಿಸಲು ಉಕ್ರೇನ್‌ ುಡಾಯಿಸಿದ ವಾಯು ರಕ್ಷಣಾ ಕ್ಷಿಪಣಿಯಿಂದ ಆಗಿರುವ ಸಾಧ್ಯತೆ ಇದೆ ಎಂದು ಪೋಲೆಂಡ್ ಮತ್ತು ನ್ಯಾಟೊ ಹೇಳಿವೆ. ಈ ಸಂಘರ್ಷ ಆರಂಭಿಸಿದ ರಷ್ಯಾ ಇದ ಹೊಣೆ ಹೊರಬೇಕು ಎಂದು ಅವು ಹೇಳಿವೆ.

ಪೋಲೆಂಡ್‌ನ ಪ್ರಾಥಮಿಕ ಮೌಲ್ಯಮಾಪನಕ್ಕೆ ವ್ಯತಿರಿಕ್ತವಾದ ಯಾವುಏ ಅಂಶ ಕಂಡುಬಂದಿಲ್ಲ ಎಂದು ಶ್ವೇತಭವನ ಹೇಳಿದೆ. ಈ ದುರಂತ ಘಟನೆಗೆ ಅಂತಿಮವಾಗಿ ರಷ್ಯಾವೇ ಜವಾಬ್ದಾರಿ ಎಂದು ಹೇಳಿದೆ.

ಆದರೆ, ಅಧ್ಯಕ್ಷ ಝೆಲೆನ್‌ಸ್ಕಿ ಮಾತ್ರ ಉಕ್ರೇನ್‌ನಿಂದ ಕ್ಷಿಪಣಿ ದಾಳಿಯಾಗಿದೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಈ ಬಗ್ಗೆ ತನಿಖೆಗಾಗಿ ಸ್ಫೋಟದ ಸ್ಥಳಕ್ಕೆ ಪ್ರವೇಶ ನೀಡಬೇಕೆಂದು ಕೇಳಿದ್ದಾರೆ.

‘ಅದು ನಮ್ಮ ಕ್ಷಿಪಣಿ ಅಲ್ಲ ಎಂಬುದರಲ್ಲಿ ನನಗೆ ಸಂದೇಹವಿಲ್ಲ’ಎಂದು ಝೆಲೆಲ್‌ಸ್ಕಿ ಹೇಳಿದ್ದಾರೆ. ನಮ್ಮ ಮಿಲಿಟರಿ ವರದಿಗಳ ಆಧಾರದ ಮೇಲೆ ಇದು ರಷ್ಯಾದ ಕ್ಷಿಪಣಿ ಎಂದು ನಾನು ನಂಬುತ್ತೇನೆ ಎಂದಿದ್ದಾರೆ.

ಆದರೆ, ಬುಧವಾರ ಈ ಬಗ್ಗೆ ಹೇಳಿಕೆ ನೀಡಿದ್ದ ಪೋಲೆಂಡ್ ಅಧ್ಯಕ್ಷ ಆಂಡ್ರೆಜ್ ಡುಡಾ, ಉಕ್ರೇನ್‌ನ ವಾಯು ರಕ್ಷಣಾ ವ್ಯವಸ್ಥೆಯಿಂದಲೇ ಈ ದಾಳಿ ನಡೆದಿರುವ ಸಾಧ್ಯತೆ ಇದೆ ಎಂಬ ನಿರ್ಧಾರಕ್ಕ ಬಂದಿರುವುದಾಗಿ ಘೋಷಿಸಿದ್ದರು.

ಈ ಕ್ಷಿಪಣಿ ಸ್ಫೋಟವು ಉಕ್ರೇನ್ ಸಂಘರ್ಷ ಉಲ್ಬಣಗೊಳ್ಳುವ ಆತಂಕ ಸೃಷ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.