ADVERTISEMENT

ಫಿನ್ಲೆಂಡ್‌ಗೆ ಸದ್ಯದಲ್ಲೇ ನ್ಯಾಟೊ ಸದಸ್ಯತ್ವ: ಜೇನ್ಸ್‌ ಸ್ಟೋಲ್ಟೆನ್‌ಬರ್ಗ್‌

ಏಜೆನ್ಸೀಸ್
Published 31 ಮಾರ್ಚ್ 2023, 14:22 IST
Last Updated 31 ಮಾರ್ಚ್ 2023, 14:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬ್ರಸೆಲ್ಸ್‌: ಫಿನ್ಲೆಂಡ್‌ ಇನ್ನು ಕೆಲವೇ ದಿನಗಳಲ್ಲಿ ಔ‍ಪಚಾರಿಕವಾಗಿ ನ್ಯಾಟೊ ಸದಸ್ಯತ್ವ ಹೊಂದಲಿದೆ ಎಂದು ನ್ಯಾಟೊ ಮುಖ್ಯಸ್ಥ ಜೇನ್ಸ್‌ ಸ್ಟೋಲ್ಟೆನ್‌ಬರ್ಗ್‌ ಶುಕ್ರವಾರ ಹೇಳಿದ್ದಾರೆ.

ನ್ಯಾಟೊ ಸೇರಲು ಎದುರಾಗಿದ್ದ ಅಂತಿಮ ಅಡಚಣೆ ನಿವಾರಿಸಿದ ಫಿನ್ಲೆಂಡ್‌ ಅಧ್ಯಕ್ಷರನ್ನು ಅಭಿನಂದಿಸಿರುವ ಸ್ಟೋಲ್ಟೆನ್‌ಬರ್ಗ್‌ ‘ಮುಂಬರುವ ದಿನಗಳಲ್ಲಿ ನ್ಯಾಟೊ ಪ್ರಧಾನ ಕಚೇರಿ ಮೇಲೆ ಫಿನ್ಲೆಂಡ್‌ ಧ್ವಜ ಹಾರುವುದನ್ನು ಎದುರು ನೋಡುತ್ತೇನೆ. ನಾವೆಲ್ಲರೂ ಒಗ್ಗಟ್ಟಾಗಿದ್ದು, ಶಕ್ತಿಶಾಲಿಯಾಗಿದ್ದೇವೆ ಮತ್ತು ಸುರಕ್ಷಿತವಾಗಿದ್ದೇವೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಅಮೆರಿಕ ನೇತೃತ್ವದ ಮೈತ್ರಿ ರಾಷ್ಟ್ರಗಳ ನ್ಯಾಟೊ ಸದಸ್ಯತ್ವ ಕೋರಿಕೆಯ ಅರ್ಜಿ ಅಂಗೀಕರಿಸಲು ಎದುರಾಗಿದ್ದ ಕೊನೆಯ ಹಂತದ ಅಡೆತಡೆಯನ್ನು ತಿಂಗಳ ವಿಳಂಬದ ನಂತರ ಟರ್ಕಿಯ ಸಂಸತ್ತು ಗುರುವಾರ ತೆರವುಗೊಳಿಸಿತು. ಇದರಿಂದ ನ್ಯಾಟೊ ಸೇರುವ ಫಿನ್ಲೆಂಡ್‌ ಹಾದಿ ಸುಗಮವಾಗಿದೆ.

ADVERTISEMENT

ಮುಂದಿನ ವಾರ ಬ್ರಸೆಲ್ಸ್‌ನಲ್ಲಿ ನಡೆಯಲಿರುವ ನ್ಯಾಟೊ ವಿದೇಶಾಂಗ ಸಚಿವರ ಸಭೆಯಲ್ಲಿ ಫಿನ್ಲೆಂಡ್‌ನ ಸದಸ್ಯತ್ವ ಘೋಷಣೆಯ ಪ್ರಕ್ರಿಯೆ ಔಪಚಾರಿಕವಾಗಿ ನಡೆಯಬಹುದು ಎಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.