ADVERTISEMENT

ಮುನ್ನೆಡೆ ಕಾಯ್ದುಕೊಂಡ ನೇಪಾಳಿ ಕಾಂಗ್ರೆಸ್‌

ಪಿಟಿಐ
Published 4 ಡಿಸೆಂಬರ್ 2022, 12:39 IST
Last Updated 4 ಡಿಸೆಂಬರ್ 2022, 12:39 IST
ಶೇರ್‌ ಬಹದ್ದೂರ್‌ ದೇವುಬಾ
ಶೇರ್‌ ಬಹದ್ದೂರ್‌ ದೇವುಬಾ   

ಕಾಠ್ಮಂಡು: ನೇಪಾಳ ಸಂಸತ್‌ ಚುನಾವಣೆಯಲ್ಲಿ ಅಲ್ಲಿಯ ಪ್ರಧಾನಿ ಶೇರ್‌ ಬಹದ್ದೂರ್‌ ದೇವುಬಾ ಮುನ್ನಡೆಸುತ್ತಿರುವ ನೇಪಾಳಿ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟವು ಮುನ್ನೆಡೆ ಕಾಯ್ದುಕೊಂಡಿದೆ.

ಪಕ್ಷದ ಅಭ್ಯರ್ಥಿ ಧನರಾಜ್‌ ಗುರುಂಗ್‌ ಅವರು ಸೈಯಂಜ ಕ್ಷೇತ್ರದಿಂದ ಗೆಲುವು ಸಾಧಿಸಿದ ಬಳಿಕ ನೇಪಾಳಿ ಕಾಂಗ್ರೆಸ್‌ ಮುನ್ನಡೆ ಕಾಯ್ದುಕೊಂಡಿರುವುದಾಗಿ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಈ ಗೆಲುವಿನ ಮೂಲಕ ನೇಪಾಳಿ ಕಾಂಗ್ರೆಸ್‌ 57 ಸಂಸದ ಸ್ಥಾನಗಳನ್ನು ನೇರ ಚುನವಣೆಯಲ್ಲಿ ಗೆದ್ದಿದೆ. ಅದರ ಸಮೀಪ ಎದುರಾಳಿ ಸಿಪಿಎನ್‌–ಯುಎಂಎಲ್‌ 44 ಸ್ಥಾನಗಳನ್ನು ನೇರ ಮತದಾನದಲ್ಲಿ ಗೆದ್ದಿದೆ.ಸಿಪಿಎನ್‌– ಮಾವೋಯಿಸ್ಟ್‌ ಸೆಂಟರ್‌ 17 ಸ್ಥಾನಗಳನ್ನು ಮತ್ತು ಸಿಪಿಎನ್‌– ಯುನಿಫೈಡ್‌ ಸೋಸಿಯಲಿಸ್ಟ್‌ 10 ಸ್ಥಾನಗಳನ್ನು ಗೆದ್ದಿವೆ.

ADVERTISEMENT

ಈವರೆಗೆ 163 ಕ್ಷೇತ್ರಗಳ ಮತ ಎಣಿಕೆ ಮುಗಿದಿದೆ. ಕೇವಲ ಎರಡು ಕ್ಷೇತ್ರಗಳ ಮತ ಎಣಿಕೆ ಮಾತ್ರ ಬಾಕಿ ಇದೆ. 275 ಸದಸ್ಯ ಸ್ಥಾನಗಳ ನೇಪಾಳ ಸಂಸತ್ತಿನ 165 ಸದಸ್ಯರನ್ನು ನೇರ ಚುನಾವಣೆ ಮೂಲಕ ಆರಿಸಲಾಗುವುದು ಮತ್ತು ಬಾಕಿ 110 ಸದಸ್ಯರು ಪರೋಕ್ಷ ಚುನಾವಣಾ ಪ್ರಕ್ರಿಯೆ ಮೂಲಕ ಆಯ್ಕೆ ಆಗುವರು.

ಬಹುಮತ ಪಡೆಯಲು ಒಂದು ಪಕ್ಷವು 138 ಸ್ಥಾನಗಳನ್ನು ಗೆಲ್ಲಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.