ADVERTISEMENT

ನ್ಯೂಜಿಲೆಂಡ್‌ನಲ್ಲಿ ತುರ್ತುಸ್ಥಿತಿ

500ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದು

ಏಜೆನ್ಸೀಸ್
Published 14 ಫೆಬ್ರುವರಿ 2023, 18:34 IST
Last Updated 14 ಫೆಬ್ರುವರಿ 2023, 18:34 IST
ನ್ಯೂಜಿಲೆಂಡ್‌ನ ಪಶ್ಚಿಮ ಆಕ್ಲೆಂಡ್‌ನ ಉಪನಗರ ಟಿಟಿರಂಗಿಯಲ್ಲಿ ಚಂಡಮಾರುತದಿಂದ ಮನೆಗಳು ನಾಮಾವಶೇಷವಾಗಿವೆ– ಎಎಫ್‌ಪಿ ಚಿತ್ರ
ನ್ಯೂಜಿಲೆಂಡ್‌ನ ಪಶ್ಚಿಮ ಆಕ್ಲೆಂಡ್‌ನ ಉಪನಗರ ಟಿಟಿರಂಗಿಯಲ್ಲಿ ಚಂಡಮಾರುತದಿಂದ ಮನೆಗಳು ನಾಮಾವಶೇಷವಾಗಿವೆ– ಎಎಫ್‌ಪಿ ಚಿತ್ರ   

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ಗೆ ಗೇಬ್ರಿಯೆಲ್ ಚಂಡಮಾರುತ ಅಪ್ಪಳಿಸಿದ್ದು, ವ್ಯಾಪಕ ಹಾನಿ ಆಗಿದೆ. ಚಂಡಮಾರು
ತವು ತಂದೊಡ್ಡಿರುವ ವಿನಾಶ ಮತ್ತು ವ್ಯಾಪಕ ಪ್ರವಾಹದಿಂದಾಗಿ ಸರ್ಕಾರವು ಮಂಗಳವಾರ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿದೆ.

‘ನ್ಯೂಜಿಲೆಂಡ್ ಜನರಿಗೆ ಈ ಚಂಡಮಾರುತವು ನಿಜವಾದ ಅಪಾಯ ತಂದೊಡ್ಡಿದೆ’ ಎಂದು ತುರ್ತುಸ್ಥಿತಿ ನಿರ್ವಹಣಾ ಸಚಿವ ಕೀರನ್ ಮ್ಯಾಕ್
ಅನ್ನಾಲ್ಟಿ ಸುದ್ದಿಗಾರರಿಗೆ ತಿಳಿಸಿದರು.

ವಿಮಾನ, ರೈಲು ಹಾಗೂ ಸಾರಿಗೆ ಸೇವೆಗಳನ್ನು ರದ್ದುಪಡಿಸಲಾಯಿತು. ಏರ್ ನ್ಯೂಜಿಲೆಂಡ್ 500ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದುಗೊಳಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.