ADVERTISEMENT

ಕೊರೊನಾ ವೈರಸ್‌ನ ಮತ್ತಷ್ಟು ತಳಿಗಳ ಸೃಷ್ಟಿ ಖಚಿತ: ಡಬ್ಲ್ಯುಎಚ್‌ಒ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜನವರಿ 2022, 10:35 IST
Last Updated 28 ಜನವರಿ 2022, 10:35 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಜಿನಿವಾ: ನಾವು, ನೀವು ಮಾತನಾಡುತ್ತಿರುವಂತೆ ಓಮೈಕ್ರಾನ್‌ ತಳಿಯೇ ಕೊನೆಯದ್ದಲ್ಲ. ಕೊರೊನಾ ವೈರಸ್‌ನ ಮತ್ತಷ್ಟು ತಳಿಗಳ ಸೃಷ್ಟಿ ಖಚಿತ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮರಿಯಾ ವ್ಯಾನ್‌ ಕೆರ್ಖೋವ್‌ ಶುಕ್ರವಾರ ತಿಳಿಸಿದ್ದಾರೆ.

‘ಮುಂದಿನ ರೂಪಾಂತರಿಯು ಹೆಚ್ಚು ವ್ಯಾಪಕವಾಗಿ ಹಬ್ಬುವ ಸಾಧ್ಯತೆ ಇದೆ. ಮುಂದಿನ ತಳಿಗಳು ಹೆಚ್ಚು ಶಕ್ತಿಶಾಲಿಯಾಗಿರಲಿವೆಯೇ, ರೋಗನಿರೋಧಕ ಶಕ್ತಿಯನ್ನೇ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಅವುಗಳು ಹೊಂದಿರಬಹುದೇ, ಅವುಗಳ ಮೇಲೆ ನಮ್ಮ ಲಸಿಕೆ, ಔಷಧಗಳು ಪರಿಣಾಮ ಬೀರದೇ ಹೋಗಿಬಿಡಬಹುದೇ ಎಂಬುದು ಚರ್ಚೆಯ ವಿಷಯ. ಅಂಥ ಪರಿಸ್ಥಿತಿ ಉದ್ಭವಿಸಬಾರದು ಎಂಬುದು ನಮ್ಮ ಕಾಳಜಿಯಾಗಿದೆ’ ಎಂದು ಅವರು ಹೇಳಿದ್ದಾರೆ.

‘ಕೊರೊನಾ ವೈರಸ್‌, ಅದರ ರೂಪಾಂತರಗಳು, ಅವುಗಳ ಮುಂದಿನ ಪರಿಣಾಮಗಳ ಬಗ್ಗೆ ನಮಗೆ ಈಗಲೂ ಸಂಪೂರ್ಣವಾಗಿ ಗೊತ್ತಿಲ್ಲ. ಆದರೆ, ಅವುಗಳ ಮೇಲೆ ಪರಿಣಾಮ ಬೀರುವ ಅಂಶಗಳತ್ತ ಮಾತ್ರ ನಾವು ಗಮನ ಹರಿಸಿದ್ದೇವೆ. ಲಸಿಕೆಗಳು ಅವುಗಳ ಮೇಲೆ ಪರಿಣಾಮ ಬೀರುತ್ತವೆ. ಜನ ಕೊರೊನಾ ವೈರಸ್‌ನಿಂದ ಗಂಭೀರಗೊಂಡು, ಆಸ್ಪತ್ರೆ ಸೇರುವುದನ್ನು ಮತ್ತು ಸಾವಿಗೀಡಾಗುವುದನ್ನು ಲಸಿಕೆಗಳು ತಪ್ಪಿಸುತ್ತವೆ,’ ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.