ADVERTISEMENT

ನೈಜೀರಿಯಾ | ಬಂಡುಕೋರರನ್ನು ಗುರಿಯಾಗಿಸಿ ವೈಮಾನಿಕ ದಾಳಿ: 20 ನಾಗರಿಕರು ಸಾವು

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 13:45 IST
Last Updated 13 ಜನವರಿ 2025, 13:45 IST
.d
.d   

ಅಬುಜಾ (ನೈಜೀರಿಯಾ): ಬಂಡುಕೋರರನ್ನು ಗುರಿಯಾಗಿಸಿ ನೈಜೀರಿಯಾ ಸೇನೆಯು ನಡೆಸಿದ ವೈಮಾನಿಕ ದಾಳಿಯಲ್ಲಿ ಸುಮಾರು 20 ನಾಗರಿಕರು ಮೃತಪಟ್ಟಿದ್ದು, 10 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

‘ಝಂಫರಾ ರಾಜ್ಯದ ಜುರ್ಮಿ ಮತ್ತು ಮರದೂನ್ ಪ್ರದೇಶದಲ್ಲಿ ವಾಯುಪಡೆಯು ಬಂಡುಕೋರರನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಆದರೆ, ತುಂಗಾರ್‌ ಕಾರಾ ಪ್ರದೇಶದಲ್ಲಿ ನಡೆದ ಕಾರ್ಯಚರಣೆಯಲ್ಲಿ ಬಂಡುಕೋರರು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಸೇನೆ ತಪ್ಪಾಗಿ ಗ್ರಹಿಸಿ, ಸಾರ್ವಜನಿಕರ ಮೇಲೆ ದಾಳಿ ಮಾಡಿದೆ’ ಎಂದು ನೈಜೀರಿಯಾ ರಾಜ್ಯಪಾಲರ ವಕ್ತಾರ ಸುಲೈಮಾನ್‌ ಬಾಲಾ ಇದ್ರೀಸ್‌ ಭಾನುವಾರ ತಿಳಿಸಿದ್ದಾರೆ.

‘ದಾಳಿಯಲ್ಲಿ ನಾಗರಿಕ ಜಂಟಿ ಕಾರ್ಯಪಡೆಯ ಕೆಲ ಸದಸ್ಯರು ಮತ್ತು ಸ್ಥಳೀಯ ಜಾಗೃತ ಸಿಬ್ಬಂದಿಗೆ ಗಾಯಗಳಾಗಿವೆ ಮತ್ತು ಜೀವಹಾನಿ ಕೂಡ ಸಂಭವಿಸಿದೆ’ ಎಂದು ಇದ್ರೀಸ್‌ ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.