ADVERTISEMENT

ನೈಟ್‌ಕ್ಲಬ್‌ನ ಬಾಲ್ಕನಿ ಕುಸಿತ: ಇಬ್ಬರು ಸಾವು, 16 ಜನರಿಗೆ ಗಾಯ

8 ಈಜುಪಟುಗಳಿಗೆ ಗಾಯ

ಏಜೆನ್ಸೀಸ್
Published 27 ಜುಲೈ 2019, 20:26 IST
Last Updated 27 ಜುಲೈ 2019, 20:26 IST
   

ಸೋಲ್: ದಕ್ಷಿಣ ಕೊರಿಯಾದ ಗುವಾಂಗ್ಜು ಪಟ್ಟಣದ ನೈಟ್ ಕ್ಲಬ್‌ನ ಬಾಲ್ಕನಿ ಕುಸಿತ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಗಾಯಗೊಂಡ 16 ಜನರಲ್ಲಿ 8 ಮಂದಿ ಅಂತರಾಷ್ಟ್ರೀಯ ಮಟ್ಟದ ಈಜುಪಟುಗಳು ಸೇರಿದ್ದಾರೆ. ಬಾಲ್ಕನಿ ಕುಸಿತದ ಸಂದರ್ಭದಲ್ಲಿ ನೈಟ್‌ಕ್ಲಬ್‌
ನಲ್ಲಿ ನೂರಾರು ಮಂದಿ ನೆರೆದಿದ್ದರು. ಬಾಲ್ಕನಿಯ ಅವೈಜ್ಞಾನಿಕ ವಿನ್ಯಾಸವೇ ಕುಸಿತಕ್ಕೆ ಕಾರಣವೆಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವ ಈಜು ಚಾಂಪಿಯನ್‌ಶಿಪ್‌ನಲ್ಲಿ ಗೆದ್ದವರು ನೈಟ್‌ಕ್ಲಬ್‌ನಲ್ಲಿ ವಿಜಯೋತ್ಸವದ ಸಂಭ್ರಮಾಚರಣೆ ನಡೆಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ADVERTISEMENT

ಈಜುಪಟುಗಳಲ್ಲಿ ಮೂವರು ಅಮೆರಿಕನ್ನರು, ಇಬ್ಬರು ನ್ಯೂಜಿಲೆಂಡ್, ಉಳಿದಂತೆ ಡಚ್, ಇಟಲಿ ಮತ್ತು ಬ್ರೆಜಿಲ್‌ಗೆ ಸೇರಿದ ಈಜಪಟುಗಳಿದ್ದರು. ಆದರೆ, ಈಜುಪಟುಗಳ ಹೆಸರುಗಳನ್ನು ಬಹಿರಂಗಪಡಿಸಲು ಆಯೋಜಕರು ನಿರಾಕರಿಸಿದ್ದಾರೆ.

ನೈಟ್‌ಕ್ಲಬ್ ನಡೆಸುತ್ತಿದ್ದ ಮಾಲೀಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.