ADVERTISEMENT

ಸ್ಪೆಲಿಂಗ್‌ ಬೀ ಸ್ಪರ್ಧೆಯ ಫಿನಾಲೆಯಲ್ಲಿ 9 ಮಂದಿ ಭಾರತೀಯ ಅಮೆರಿಕನ್ನರು

ಪಿಟಿಐ
Published 29 ಜೂನ್ 2021, 6:17 IST
Last Updated 29 ಜೂನ್ 2021, 6:17 IST
2018ರಲ್ಲಿ ನಡೆದ ಸ್ಕ್ರಿಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್‌ ಬೀ ಸ್ಪರ್ಧೆ     –ಸಂಗ್ರಹ ಚಿತ್ರ      
2018ರಲ್ಲಿ ನಡೆದ ಸ್ಕ್ರಿಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್‌ ಬೀ ಸ್ಪರ್ಧೆ     –ಸಂಗ್ರಹ ಚಿತ್ರ         

ವಾಷಿಂಗ್ಟನ್‌: 2021ನೇ ಸಾಲಿನ ಪ್ರತಿಷ್ಠಿತ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯ ಅಂತಿಮ ಸುತ್ತಿಗೆ ತಲುಪಿದ 11 ಸ್ಪರ್ಧಿಗಳ ಪೈಕಿ 9 ಮಂದಿ ಭಾರತೀಯ ಅಮೆರಿಕನ್ನರು.

‘ಭಾರತ ಸಂಜಾತರಾದ 9 ಮಂದಿ ಸೇರಿದಂತೆ 11 ಸ್ಪರ್ಧಿಗಳು ಜುಲೈ 8ರಂದು ನಡೆಯಲಿರುವ ಸ್ಕ್ರಿಪ್ಸ್ ರಾಷ್ಟ್ರೀಯ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯ ಫಿನಾಲೆಯಲ್ಲಿ ಚಾಂಪಿಯನ್‌ ಟೈಟಲ್‌ಗೆ ಸೆಣಸಾಡಲಿದ್ದಾರೆ’ ಎಂದು ಸೋಮವಾರ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.

ಅಮೆರಿಕದ ಜನಸಂಖ್ಯೆಯಲ್ಲಿ ಭಾರತೀಯ ಅಮೆರಿಕನ್ನರು ಶೇಕಡ 1 ರಷ್ಟಿದ್ದಾರೆ. ಆದರೂ ಕಳೆದ 20 ವರ್ಷಗಳಿಂದ ಅಮೆರಿಕದ ಸ್ಪೆಲಿಂಗ್‌ ಬೀ ಸ್ಪರ್ಧೆಯಲ್ಲಿ ‍ಭಾರತೀಯ ಅಮೆರಿಕನ್ನರು ಪ್ರಾಬಲ್ಯ ಸಾಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.