ADVERTISEMENT

ಒಹಿಯೊ ರಾಜ್ಯ ಸೆನೆಟ್‌ಗೆ ನೀರಜ್ ಅಂಟಾನಿ ಆಯ್ಕೆ

ಪಿಟಿಐ
Published 4 ನವೆಂಬರ್ 2020, 8:14 IST
Last Updated 4 ನವೆಂಬರ್ 2020, 8:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ, 29 ವರ್ಷದ ನೀರಜ್ ಅಂಟಾನಿ ಅವರು ಒಹಿಯೊ ರಾಜ್ಯದಿಂದ ಸೆನೆಟ್‌ಗೆ ಆಯ್ಕೆಯಾಗಿದ್ದು, ಭಾರತ ಮೂಲದ ಅಮೆರಿಕನ್ನರಾಗಿ ಇತಿಹಾಸ ಸೃಷ್ಟಿಸಿದ್ದಾರೆ.

ಅಂಟಾನಿ ಅವರು ಡೆಮಾಕ್ರಟಿಕ್ ಪಕ್ಷದ ಮಾರ್ಕ್ ಫೊಜೆಲ್ ಅವರನ್ನು ಪರಾಭವಗೊಳಿಸಿ ಸೆನೆಟ್‌ಗೆ ಆಯ್ಕೆಯಾದರು.

ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಅವರು ಒಹಿಯೊದಿಂದ ಚುನಾಯಿತರಾದ ಮೊದಲ ಭಾರತೀಯ ಅಮರಿಕನ್ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.

ADVERTISEMENT

‘ನನ್ನನ್ನು ಬೆಂಬಲಿಸಿದ ಸಮುದಾಯಕ್ಕೆ ಆಭಾರಿಯಾಗಿದ್ದೇನೆ. ಭಾರತದಲ್ಲಿ ಬ್ರಿಟಿಷರ ಆಡಳಿತದಲ್ಲಿಯೇ ನನ್ನ ತಾತ, ಮುತ್ತಾತಂದಿರು ಹೆಚ್ಚಿನ ಜೀವಿತಾವಧಿಯನ್ನು ಕಳೆದಿದ್ದಾರೆ’ ಎಂದು ಅವರು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.