ADVERTISEMENT

ಫೋಬ್ಸ್‌ ಪಟ್ಟಿಯಲ್ಲಿ ನಿರ್ಮಲಾ, ಕಿರಣ್‌ ಮಜುಂದಾರ್‌ ಷಾ

ವಿಶ್ವದ 100 ಸಶಕ್ತಶಾಲಿ ಮಹಿಳೆಯರಲ್ಲಿ ಸ್ಥಾನ ಪಡೆದ ಭಾರತೀಯ ಮಹಿಳೆಯರು

ಪಿಟಿಐ
Published 8 ಡಿಸೆಂಬರ್ 2020, 20:51 IST
Last Updated 8 ಡಿಸೆಂಬರ್ 2020, 20:51 IST
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್   

ನ್ಯೂಯಾರ್ಕ್: ಭಾರತದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಷಾ, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ಎಚ್‌ಸಿಎಲ್ ಎಂಟರ್‌ಪ್ರೈಸ್‌ ಸಿಇಒ ರೋಶನಿ ನಾಡಾರ್ ಮಲ್ಹೋತ್ರಾ ಅವರು ‘ಫೋಬ್ಸ್‌’ ಪತ್ರಿಕೆಯ ವಿಶ್ವದ 100 ಸಶಕ್ತಶಾಲಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

‘ಫೋಬ್ಸ್‌’ನ ಈ ಪಟ್ಟಿಯಲ್ಲಿ ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಮೊದಲ ಸ್ಥಾನದಲ್ಲಿದ್ದಾರೆ. ಮರ್ಕೆಲ್ ಸತತವಾಗಿ 10 ವರ್ಷಗಳಿಂದಲೂ ಮೊದಲ ಸ್ಥಾನವನ್ನೇ ಕಾಯ್ದುಕೊಂಡಿರುವುದು ವಿಶೇಷ. ‌‌

ಕಮಲಾ ಹ್ಯಾರಿಸ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. ನಿರ್ಮಲಾ ಸೀತಾರಾಮನ್ 41ನೇ ಸ್ಥಾನ, ರೋಶನಿ 55ನೇ ಸ್ಥಾನ ಹಾಗೂ ಕಿರಣ್ ಅವರು 68ನೇ ಸ್ಥಾನದಲ್ಲಿದ್ದಾರೆ. ಲ್ಯಾಂಡ್ ಮಾರ್ಕ್ ಗುಂಪಿನ ಅಧ್ಯಕ್ಷೆ ರೇಣುಕಾ ಜಗ್‌ಟಿಯಾನಿ 98ನೇ ಸ್ಥಾನದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.