ADVERTISEMENT

AI ಆಧಾರಿತ ಆತ್ಮಾಹುತಿ ಡ್ರೋ‌ನ್ ಪರೀಕ್ಷೆ ಮೇಲ್ವಿಚಾರಣೆ ನಡೆಸಿದ ಉ.ಕೊರಿಯಾ ನಾಯಕ

ಏಜೆನ್ಸೀಸ್
Published 27 ಮಾರ್ಚ್ 2025, 4:17 IST
Last Updated 27 ಮಾರ್ಚ್ 2025, 4:17 IST
<div class="paragraphs"><p>ಅಧಿಕಾರಿಯೊಂದಿಗೆ ಕಿಮ್ ಜಾಂಗ್‌ ಉನ್‌ </p></div>

ಅಧಿಕಾರಿಯೊಂದಿಗೆ ಕಿಮ್ ಜಾಂಗ್‌ ಉನ್‌

   

ರಾಯಿಟರ್ಸ್‌ ಚಿತ್ರ

ಸೋಲ್‌: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಆತ್ಮಾಹುತಿ ಡ್ರೋನ್‌ಗಳ ಪರೀಕ್ಷೆಯ ಮೇಲ್ವಿಚಾರಣೆ ನಡೆಸಿದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಆಧುನಿಕ ಶಸ್ತ್ರಾಸ್ತ್ರ ಅಭಿವೃದ್ಧಿಯಲ್ಲಿ ಮಾನವರಹಿತವಾಗಿ ನಿಯಂತ್ರಣ ಸಾಧಿಸುವುದು ಹಾಗೂ AI ಸಾಮರ್ಥ್ಯ ಅಳವಡಿಸಿಕೊಳ್ಳುವುದು ಪ್ರಮುಖ ಆದ್ಯತೆಯಾಗಿರಬೇಕು ಹೇಳಿದ್ದಾರೆ.

ADVERTISEMENT

ಈ ಬಗ್ಗೆ, ಉತ್ತರ ಕೊರಿಯಾ ಸರ್ಕಾರಿ ಒಡೆತನದ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಮುದ್ರ ಹಾಗೂ ಭೂಮಿಯ ಮೇಲೆ ಶತ್ರಗಳ ಚಟುವಟಿಕೆಗಳು, ವಿವಿಧ ಯುದ್ಧ ತಂತ್ರಗಳನ್ನು ಪತ್ತೆಹಚ್ಚುವ ಸಾಮರ್ಥ್ಯವಿರುವ ಅತ್ಯಾಧುನಿಕ ಡ್ರೋನ್‌ಗಳ ಕಾರ್ಯಾಚರಣೆಯನ್ನೂ ಕಿಮ್‌ ಪರಿಶೀಲಿಸಿದ್ದಾರೆ ಎನ್ನಲಾಗಿದೆ.

'ಮಾನವರಹಿತ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಆಧ್ಯತೆ ನೀಡಬೇಕು' ಎಂದು ಕಿಮ್‌ ಒತ್ತಿ ಹೇಳಿರುವುದಾಗಿ ಉಲ್ಲೇಖಿಸಲಾಗಿದೆ.

ಸೇನೆಯಲ್ಲಿ ಮಾನವರಹಿತ, ಕೃತಕ ಬುದ್ಧಿಮತ್ತೆ ಆಧಾರಿತ ವೈಮಾನಿಕ ಸಾಧನಗಳ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ, ಸಂಘಟಿತ ದೀರ್ಘಕಾಲಿನ ರಾಷ್ಟ್ರೀಯ ಕಾರ್ಯಕ್ರಮವನ್ನು ಉತ್ತೇಜಿಸುವುದು ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.