ADVERTISEMENT

ಗೋಪ್ಯವಾಗಿ ‘ಮಹತ್ವದ ಪರೀಕ್ಷೆ’ ನಡೆಸಿದ ಉತ್ತರ ಕೊರಿಯಾ!

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 4:16 IST
Last Updated 8 ಡಿಸೆಂಬರ್ 2019, 4:16 IST
   

ಸಿಯೋಲ್‌: ಉತ್ತರ ಕೊರಿಯಾ ಡಿ.7ರಂದು ಸೊಹೆ ರಾಕೆಟ್‌ ಉಡಾವಣೆ ಕೇಂದ್ರದಲ್ಲಿ ಮಹತ್ವದ ಪರೀಕ್ಷೆಯೊಂದನ್ನು ನಡೆಸಿದೆ. ಆದರೆ, ಅದು ಯಾವ ಪರೀಕ್ಷೆ ಎಂಬುದನ್ನು ಉತ್ತರ ಕೊರಿಯಾ ಗೋಪ್ಯವಾಗಿರಿಸಿದೆ.

‘ಡಿ.7ರಂದು ಸೊಹೆ ರಾಕೆಟ್‌ ಉಡಾವಣಾ ಕೇಂದ್ರದಲ್ಲಿ ನಾವು ಅತಿ ಮುಖ್ಯ ಪರೀಕ್ಷೆಯೊಂದನ್ನು ಕೈಗೊಂಡೆವು,’ಎಂದು ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ವಕ್ತಾರ ಅಲ್ಲಿನ ರಾಷ್ಟ್ರೀಯ ಸುದ್ದಿ ಮಾಧ್ಯಮ ಕೆಸಿಎನ್‌ಎಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಪರೀಕ್ಷಾ ಫಲಿತಾಂಶವು ಉತ್ತರ ಕೊರಿಯಾದ ರಕ್ಷಣಾ ತಂತ್ರಗಾರಿಕೆಯ ಬದಲಾವಣೆಯ ವಿಷಯದಲ್ಲಿ ಮಹತ್ವದ ಪರಿಣಾಮ ಬೀರಲಿದೆ,’ ಎಂದೂ ಅವರು ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದೆ.

ADVERTISEMENT

ಆದರೆ, ಪತ್ರಿಕಾ ಹೇಳಿಕೆಯಲ್ಲಿ ಪರೀಕ್ಷೆಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳೇನೂ ಇಲ್ಲ ಎಂದೂ ಸುದ್ದಿ ಮಾದ್ಯಮ ವರದಿ ಮಾಡಿದೆ.

ಅಣು ಒಪ್ಪಂದದ ಕುರಿತಾಗಿ ಉತ್ತರ ಕೊರಿಯಾದ ಅಧ್ಯಕ್ಷಕಿಮ್‌ ಜಾಂಗ್‌ ಉನ್‌ ಅವರು 2018ರಿಂದ ಈ ವರೆಗೆ ಅಮೆರಿಕ ಜತೆಗೆ ಮೂರು ಸಭೆಗಳನ್ನು ನಡೆಸಿದ್ದಾರೆ. ಆದರೆ, ಒಪ್ಪಂದದ ವಿಚಾರವಾಗಿಈ ವರೆಗೆ ಯಾವುದೇ ಪ್ರಗತಿಯಾಗಿಲ್ಲ. ಹೀಗಿರುವಾಗಲೇ ಉತ್ತರ ಕೊರಿಯಾ ನಡೆಸಿರುವ ಈ ಪರೀಕ್ಷೆ ವಿಶ್ವದ ಹುಬ್ಬೇರುವಂತೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.