ADVERTISEMENT

ಉತ್ತರ ಕೊರಿಯಾ: ದಕ್ಷಿಣ ಕೊರಿಯಾದ ದ್ವೀಪದ ಮೇಲೆ ಫಿರಂಗಿ ದಾಳಿ

ಏಜೆನ್ಸೀಸ್
Published 6 ಡಿಸೆಂಬರ್ 2022, 13:20 IST
Last Updated 6 ಡಿಸೆಂಬರ್ 2022, 13:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸೋಲ್: ದಕ್ಷಿಣ ಕೊರಿಯಾಕ್ಕೆ ಸೇರಿದ ದ್ವೀಪವೊಂದರ ಮೇಲೆ ಉತ್ತರ ಕೊರಿಯಾ ಮಂಗಳವಾರವೂ ಫಿರಂಗಿಗಳಿಂದ ನಡೆಸಿದೆ.

ಅಗ್ನಿ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಸುರಕ್ಷಿತವಾಗಿ ಪಾರಾಗುವುದು ಹೇಗೆ ಹಾಗೂ ಬೆಂಕಿಯನ್ನು ನಂದಿಸುವ ಕುರಿತು ಗಡಿ ಸಮೀಪದ ದ್ವೀಪವೊಂದರಲ್ಲಿ ದಕ್ಷಿಣ ಕೊರಿಯಾ ತರಬೇತಿ ಹಮ್ಮಿಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಉತ್ತರ ಕೊರಿಯಾ ದಾಳಿ ನಡೆಸಿದೆ ಎಂದು ಮೂಲಗಳು ಹೇಳಿವೆ.

‘ಪೂರ್ವ ಕರಾವಳಿ ಪಟ್ಟಣ ಕೊಸಾಂಗ್‌ ಬಳಿ ಉತ್ತರ ಕೊರಿಯಾ ಹಾರಿಸಿರುವ 90 ಸುತ್ತು ಗುಂಡುಗಳನ್ನು ಪತ್ತೆ ಮಾಡಲಾಗಿದೆ. ಕುಮ್‌ಕಾಂಗ್‌ ಪಟ್ಟಣದ ಬಳಿ 10 ಸುತ್ತುಗಳನ್ನು ಪತ್ತೆ ಮಾಡಲಾಗಿದೆ’ ಎಂದು ದಕ್ಷಿಣ ಕೊರಿಯಾ ಸೇನಾಪಡೆಗಳ ಜಂಟಿಮುಖ್ಯಸ್ಥ ತಿಳಿಸಿದ್ದಾರೆ.

ADVERTISEMENT

‘ದಕ್ಷಿಣ ಕೊರಿಯಾ ಸೋಮವಾರ 10ಕ್ಕೂ ಹೆಚ್ಚು ಸಿಡಿಮದ್ದುಗಳನ್ನು ಹಾರಿಸಿದ್ದನ್ನು ಪತ್ತೆ ಹಚ್ಚಲಾಗಿದೆ. ಇದಕ್ಕೆ ಪ್ರತಿಯಾಗಿಯೇ ದಾಳಿ ನಡೆಸಲು ಅದೇಶಿಸಲಾಗಿದೆ’ ಎಂದು ಉತ್ತರ ಕೊರಿಯಾ ಸೇನೆ ಹೇಳಿದೆ. ಸೋಮವಾರವಷ್ಟೆ ಉತ್ತರ ಕೊರಿಯಾ ಫಿರಂಗಿ ದಾಳಿ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.