ADVERTISEMENT

ಯುದ್ಧ ವಿಮಾನ ಹಾರಿಸಿ, ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ: ದಕ್ಷಿಣ ಕೊರಿಯಾ

ಏಜೆನ್ಸೀಸ್
Published 14 ಅಕ್ಟೋಬರ್ 2022, 3:16 IST
Last Updated 14 ಅಕ್ಟೋಬರ್ 2022, 3:16 IST
ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್‌ ಉನ್
ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್‌ ಉನ್   

ಸೋಲ್‌: ತನ್ನ ಪೂರ್ವ ಕರಾವಳಿ ಪ್ರದೇಶದತ್ತ ಉತ್ತರ ಕೋರಿಯಾ ಖಂಡಾಂತರ ಕ್ಷಿಪಣಿ ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾ ಆರೋಪಿಸಿದೆ.

ಶುಕ್ರವಾರ ಬೆಳಗ್ಗೆಯೇ ದಾಳಿ ನಡೆದಿದೆ ಎಂದು ದಕ್ಷಿಣ ಕೊರಿಯಾದ ಸಿಬ್ಬಂದಿ ವಿಭಾಗದ ಜಂಟಿ ಮುಖ್ಯಸ್ಥ ತಿಳಿಸಿದ್ದಾರೆ. ಆದರೆ ಹೆಚ್ಚಿನ ಮಾಹಿತಿ ನೀಡಿಲ್ಲ.

ಉತ್ತರ ಕೊರಿಯಾ ಗುರುವಾರ ತಡರಾತ್ರಿ ಗಡಿ ಪ್ರದೇಶದಲ್ಲಿ ಯುದ್ಧ ವಿಮಾನಗಳ ಹಾರಾಟ ನಡೆಸಿತು. ಇದು ದಕ್ಷಿಣ ಕೊರಿಯಾವು ಫೈಟರ್‌ ಜೆಟ್‌ಗಳನ್ನು ಸಜ್ಜುಗೊಳಿಸಲು ಪ್ರೇರೇಪಿಸಿತು ಎಂದೂ ಅವರು ಹೇಳಿದ್ದಾರೆ.

ADVERTISEMENT

ಎರಡೂ ರಾಷ್ಟ್ರಗಳ ಕಡೆಗಳಲ್ಲಿ ಸಾವು–ನೋವು ಸಂಭವಿಸಿರುವ ಬಗ್ಗೆಯಾವುದೇ ವರದಿಯಾಗಿಲ್ಲ.

ದೀರ್ಘ-ಶ್ರೇಣಿಯ ಕ್ರೂಸ್ ಕ್ಷಿಪಣಿ ಪರೀಕ್ಷೆ ನಡೆಸಿದ್ದಾಗಿ ಉತ್ತರ ಕೊರಿಯಾ ಗುರುವಾರ ಹೇಳಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.