ADVERTISEMENT

ಕಿಮ್ ಜಾಂಗ್ ಉನ್ ಅನಾರೋಗ್ಯ ಊಹಾಪೋಹಕ್ಕೆ ತೆರೆ ಎಳೆದ ಉತ್ತರ ಕೊರಿಯಾ ಮಾಧ್ಯಮ

ಏಜೆನ್ಸೀಸ್
Published 26 ಆಗಸ್ಟ್ 2020, 5:39 IST
Last Updated 26 ಆಗಸ್ಟ್ 2020, 5:39 IST
ಕಿಮ್ ಜಾಂಗ್ ಉನ್ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಪಾಲ್ಗೊಂಡ ಚಿತ್ರ -
ಕಿಮ್ ಜಾಂಗ್ ಉನ್ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಪಾಲ್ಗೊಂಡ ಚಿತ್ರ -    

ಸೋಲ್: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಕೊರೊನಾ ವೈರಸ್ ಸೋಂಕಿನ ಹಾಗೂ ಚಂಡಮಾರುತ ಕುರಿತು ಎಚ್ಚರಿಕೆ ನೀಡಲು ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಪಾಲ್ಗೊಂಡಿರುವುದನ್ನು ಅಲ್ಲಿನ ಸರ್ಕಾರಿ ಮಾಧ್ಯಮ ಕೆಸಿಎನ್‌ಎ ವರದಿ ಮಾಡಿದೆ. ಉನ್ ಆರೋಗ್ಯ ಸ್ಥಿತಿ ಬಗ್ಗೆ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಊಹಾಪೋಹ ಹರಡುತ್ತಿರುವ ಮಧ್ಯೆಯೇ ಈ ವರದಿ ಪ್ರಕಟವಾಗಿದೆ.

ಕಿಮ್ ಅವರು ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಕೊರೊನಾ ವೈರಸ್ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಮತ್ತು ವ್ಯವಸ್ಥೆಯಲ್ಲಿರುವ ಲೋಪಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ ಎಂದು ಕೆಸಿಎನ್‌ಎ ವರದಿ ಉಲ್ಲೇಖಿಸಿದೆ.

ಕಿಮ್ ಅವರು ಬಿಳಿ ಸೂಟ್ ಧರಿಸಿಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವ ಚಿತ್ರವನ್ನು ಕೊರಿಯಾದ 'ರೊಡಾಂಗ್ ಸಿನ್ಮುನ್' ಪತ್ರಿಕೆ ಸಹ ಪ್ರಕಟಿಸಿದೆ.

ಅನಾರೋಗ್ಯದಿಂದಾಗಿ ಕಿಮ್ ಅವರು ಇತ್ತೀಚೆಗೆ ಆಡಳಿತದಲ್ಲಿ ತಮ್ಮ ಸಹೋದರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸುತ್ತಿದ್ದರು ಎಂದು ದಕ್ಷಿಣ ಕೊರಿಯಾ ಬೇಹುಗಾರಿಕಾ ಸಂಸ್ಥೆ ಇತ್ತೀಚೆಗೆ ಹೇಳಿತ್ತು. ಕಿಮ್ ಜಾಂಗ್ ಉನ್ ಅವರು ಕೋಮಾದಲ್ಲಿದ್ದಾರೆ ಎಂದು ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷರ ಆಪ್ತ ಅಧಿಕಾರಿಯೊಬ್ಬರು ಹೇಳಿರುವುದಾಗಿ ‘ಕೊರಿಯಾ ಹೆರಾಲ್ಡ್’ ಇತ್ತೀಚೆಗೆ ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.