ADVERTISEMENT

ಉದ್ಯಮಿ ಸ್ವರಾಜ್‌ ಪೌಲ್‌ ಪತ್ನಿ ಅರುಣಾ ಪೌಲ್‌ ನಿಧನ

ಪಿಟಿಐ
Published 4 ಮೇ 2022, 13:27 IST
Last Updated 4 ಮೇ 2022, 13:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಂಡನ್‌: ಇಂಗ್ಲೆಂಡ್‌ನ ಅನಿವಾಸಿ ಭಾರತೀಯ ಕೈಗಾರಿಕೋದ್ಯಮಿ ಲಾರ್ಡ್‌ ಸ್ವರಾಜ್‌ ಪೌಲ್‌ ಅವರ ಪತ್ನಿ ಅರುಣಾ ಪೌಲ್‌ (86) ಮಂಗಳವಾರ ಇಲ್ಲಿ ನಿಧನರಾದರು.

ಅವರಿಗೆ ಪತಿ ಸ್ವರಾಜ್‌ ಪೌಲ್‌ (91), ಇಬ್ಬರು ಪುತ್ರರಾದ ಆಕಾಶ್‌ ಮತ್ತು ಅಂಬರ್‌ ಹಾಗೂ ಪುತ್ರಿ ಅಂಜಲಿ ಇದ್ದಾರೆ.

ಸ್ವರಾಜ್ ಪೌಲ್‌ ದಂಪತಿ ಬ್ರಿಟನ್‌ನ ಅತ್ಯಂತ ಗೌರವಾನ್ವಿತ ಅನಿವಾಸಿ ಭಾರತೀಯರೆಂದು ಗುರುತಿಸಿಕೊಂಡವರು. ಈ ದಂಪತಿ 65 ವರ್ಷಗಳ ದಾಂಪತ್ಯ ಜೀವನ ಸಾಗಿಸಿದ್ದು, 2016ರಲ್ಲಿ ವಿವಾಹದ ವಜ್ರಮಹೋತ್ಸವ ಆಚರಿಸಿದ ಸಂದರ್ಭದಲ್ಲಿ ಸ್ವತಃ ರಾಣಿ ಎರಡನೇ ಎಲಿಜಬೆತ್‌ ಅವರೇ ಶುಭಾಶಯ ಹೇಳಿದ್ದರು.

ADVERTISEMENT

ಸ್ವರಾಜ್‌ ಪೌಲ್‌ ಅವರು ಕಪಾರೊ ಉದ್ಯಮ ಸಮೂಹದ ಸಂಸ್ಥಾಪಕರಾಗಿದ್ದು, ಅವರ ಕಂಪನಿ ಅಮೆರಿಕ, ಭಾರತ, ಕೆನಡ ಮತ್ತು ಯುಎಇಗಳಲ್ಲೂ ಕಾರ್ಯಾಚರಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.