ADVERTISEMENT

Covid-19 World Update|1 ಕೋಟಿ ಸಮೀಪಿಸುತ್ತಿದೆ ಜಗತ್ತಿನ ಸೋಂಕಿತರ ಸಂಖ್ಯೆ 

​ಪ್ರಜಾವಾಣಿ ವಾರ್ತೆ
Published 25 ಜೂನ್ 2020, 17:14 IST
Last Updated 25 ಜೂನ್ 2020, 17:14 IST
ಬ್ರೆಜಿಲ್‌ನ ನದಿ ತೀರದ ಜನರಿಗೆ ಆರೋಗ್ಯ ಸೇವೆ ನೀಡಲು ಆರೋಗ್ಯ ಕಾರ್ಯಕರ್ತರು ಸೇತುವೆ ಮೇಲೆ ನಡೆದು ಹೋದಾಗ ಕಂಡ ದೃಶ್ಯ/ –ರಾಯಿಟರ್ಸ್‌ ಚಿತ್ರ
ಬ್ರೆಜಿಲ್‌ನ ನದಿ ತೀರದ ಜನರಿಗೆ ಆರೋಗ್ಯ ಸೇವೆ ನೀಡಲು ಆರೋಗ್ಯ ಕಾರ್ಯಕರ್ತರು ಸೇತುವೆ ಮೇಲೆ ನಡೆದು ಹೋದಾಗ ಕಂಡ ದೃಶ್ಯ/ –ರಾಯಿಟರ್ಸ್‌ ಚಿತ್ರ    

ಚೀನಾದ ಮೂಲಕ ವಿಶ್ವದ 196 ರಾಷ್ಟ್ರಗಳಿಗೆ ಹರಡಿರುವ ಕೊರೊನಾ ವೈರಸ್‌ ಸೋಂಕು ಸದ್ಯ ಜಗತ್ತಿನ 94,78,266 ಮಂದಿಯನ್ನು ಭಾದಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಅದು ಒಂದು ಕೋಟಿಯ ಗಡಿ ದಾಟಲಿದೆ. ಈ ಮಧ್ಯೆ ಜಗತ್ತಿನ ಅಷ್ಟೂ ಸೋಂಕಿತರ ಪೈಕಿ 47 ಲಕ್ಷ ಮಂದಿ ಗುಣಮುಖರಾಗಿದ್ದಾರೆ.

ಇನ್ನು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಗುರುವಾರ ರಾತ್ರಿಯ ಹೊತ್ತಿಗೆ 4,83,613ಕ್ಕೆ ಏರಿದ್ದು, ಅದು ಐದು ಲಕ್ಷ ಸಮೀಪಿಸಿದೆ.

ಬ್ರೆಜಿಲ್‌ನಲ್ಲಿ ಎಲ್ಲ ರಾಷ್ಟ್ರಗಳಿಗಿಂತಲೂ ಅತಿ ವೇಗವಾಗಿ ಸೋಂಕು ಹರಡುತ್ತಿದೆ. ಕಳೆದ 24 ಗಂಟೆಗಳಲ್ಲಿ ಅಲ್ಲಿ ಬರೋಬ್ಬರಿ 42,725 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಜನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದೇಶದಲ್ಲಿ ಅತಿ ಬೇಗನೆ ಲಾಕ್‌ಡೌನ್‌ ಅನ್ನು ತೆರವುಗೊಳಿಸಿದ್ದರ ಪರಿಣಾಮವಿದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬ್ರೆಜಿನಲ್ಲಿ 11,88,631 ಮಂದಿಗೆ ಸೋಂಕು ತಗುಲಿದ್ದು, 53,830 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ಇದೇ ವೇಳೆ, ಅತಿ ಹೆಚ್ಚು ಸೋಂಕಿತರನನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ಎಂದಿನಂತೇ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ. 23,88,865 ಮಂದಿ ಅಲ್ಲಿ ಸೋಂಕಿಗೆ ತುತ್ತಾಗಿದ್ದಾರೆ. ಅಲ್ಲದೆ, ಅಲ್ಲಿ ಸಾವಿನ ಸಂಖ್ಯೆ 1,22,071ಗೆ ಏರಿದೆ. ಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ 36 ಸಾವಿರಕ್ಕೂ ಅಧಿಕ ಕೋವಿಡ್‌ 19 ಪ್ರಕರಣಗಳು ಪತ್ತೆಯಾಗಿವೆ.

ಇನ್ನೊಂದೆಡೆ, ರಷ್ಯಾ ಸೋಂಕಿತರ ಸಂಖ್ಯೆ 6 ಲಕ್ಷ ದಾಟಿದೆ. ಅಲ್ಲಿ 6,13,148 ಸೋಂಕಿತರಿದ್ದರೆ, 8,594 ಮಂದಿ ಸಾವಿಗೀಡಾಗಿದ್ದಾರೆ. ಸೋಂಕಿತರ ಸಂಖ್ಯೆಗೆ ಪ್ರತಿಯಾಗಿ ಸಂಭವಿಸಿರುವ ಸಾವುಗಳ ಸಂಖ್ಯೆಯಲ್ಲಿ ರಷ್ಯಾವನ್ನು ಇತರ ದೇಶಗಳಿಗೆ ಹೋಲಿಸಿದರೆ, ಅಲ್ಲಿ ಗಣನೀಯವಾಗಿ ಕಡಿಮೆ ಇದೆ.

ಭಾರತದಲ್ಲಿ 4,73,105ಕ್ಕೆ ಏರಿಕೆಯಾಗಿದ್ದು, 5 ಲಕ್ಷದ ಕಡೆಗೆ ಅತಿ ವೇಗವಾಗಿ ಮುಖ ಮಾಡಿದೆ. \

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.