ADVERTISEMENT

ಜರ್ಮನಿ: ಒಂಬತ್ತನೇ ಛಾನ್ಸಲರ್‌ ಆಗಿ ಒಲಾಫ್‌ ಶೋಲ್ಜ್ ಆಯ್ಕೆ

ಏಜೆನ್ಸೀಸ್
Published 8 ಡಿಸೆಂಬರ್ 2021, 11:00 IST
Last Updated 8 ಡಿಸೆಂಬರ್ 2021, 11:00 IST
ಒಲಾಫ್ ಶೋಲ್ಜ್‌ -ರಾಯಿಟರ್ಸ್‌ ಚಿತ್ರ
ಒಲಾಫ್ ಶೋಲ್ಜ್‌ -ರಾಯಿಟರ್ಸ್‌ ಚಿತ್ರ   

ಬರ್ಲಿನ್‌: ಜರ್ಮನಿಯ ಸಂಸತ್‌ ಬುಧವಾರ ಒಲಾಫ್‌ ಶೋಲ್ಜ್‌ ಅವರನ್ನು ದೇಶದ ಒಂಬತ್ತನೇ ಛಾನ್ಸಲರ್‌ ಆಗಿ ಆಯ್ಕೆ ಮಾಡಿತು. 16 ವರ್ಷ ಅಧಿಕಾರ ನಡೆಸಿದ ಅಂಗೆಲಾ ಮೆರ್ಕೆಲ್‌ ಅವರಿಂದ ತೆರವಾದ ಸ್ಥಾನವನ್ನು ಶೋಲ್ಜ್‌ ತುಂಬಲಿದ್ದಾರೆ.

395–303 ಮತಗಳ ಅಂತರದೊಂದಿಗೆ ಶೋಲ್ಜ್‌ ಅವರು ಛಾನ್ಸಲರ್‌ ಆಗಿ ಆಯ್ಕೆಯಾದರು.736 ಸದಸ್ಯರಿರುವ ಸಂಸತ್‌ನ ಕೆಳಮನೆಯಲ್ಲಿ ಶೋಲ್ಜ್‌ ನೇತೃತ್ವದ ಮೂರು ಪಕ್ಷಗಳ ಸಮ್ಮಿಶ್ರ ಒಕ್ಕೂಟ 416 ಸ್ಥಾನಗಳನ್ನು ಹೊಂದಿದೆ.

ಮೆರ್ಕೆಲ್‌ ಅವರು ಈಗ ಸಂಸತ್ ಸದಸ್ಯರಲ್ಲ. ಹೀಗಾಗಿ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಅವರು ಮತದಾನವನ್ನು ವೀಕ್ಷಿಸಿದರು. ಕಲಾಪ ಆರಂಭವಾಗುತ್ತಿದ್ದಂತೆಯೇ ಸದಸ್ಯರು ಎದ್ದುನಿಂತು ಮೆರ್ಕೆಲ್‌ ಅವರ ಸೇವೆಗೆ ಕೃತಜ್ಞತೆ ಸಲ್ಲಿಸಿದರು.

ADVERTISEMENT

ಜರ್ಮನಿಯನ್ನು ಆಧುನಿಕ ಪಥದಲ್ಲಿ ಕೊಂಡೊಯ್ಯುವ ಮತ್ತು ಹವಾಮಾನ ಬದಲಾವಣೆಗೆ ದೇಶವನ್ನು ಸಜ್ಜುಗೊಳಿಸುವ ಬಹಳ ದೊಡ್ಡ ಹೊಣೆಗಾರಿಕೆ ಶೋಲ್ಜ್ (63) ಅವರ ಮೇಲಿದ್ದು, 2018ರಿಂದೀಚೆಗೆ ಅವರು ವೈಸ್‌ ಛಾನ್ಸಲರ್‌ ಆಗಿದ್ದುದು ಮತ್ತು ಹಣಕಾಸು ಸಚಿವರಾಗಿದ್ದುದು ಅವರ ಆಡಳಿತ ನಿರ್ವಹಣೆಗೆ ನೆರವಾಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.