ADVERTISEMENT

40 ವರ್ಷಗಳ ಕಾಲ ಭೂಮಿಯನ್ನು ಸುತ್ತಿದ್ದ ನಾಸಾದ ಸಿಷ್ಕ್ರಿಯ ಉಪಗ್ರಹ ಸುರಕ್ಷಿತ ಪತನ

ಏಜೆನ್ಸೀಸ್
Published 10 ಜನವರಿ 2023, 13:46 IST
Last Updated 10 ಜನವರಿ 2023, 13:46 IST
   

ಕೇಪ್ ಕ್ಯಾನವೆರೆಲ್‌, ಅಮೆರಿಕ (ಎಪಿ): ಸುಮಾರು 40 ವರ್ಷಗಳ ಕಾಲ ಭೂಮಿಯನ್ನು ಸುತ್ತಿದ್ದ ನಾಸಾದ ನಿಷ್ಕ್ರಿಯ ಉಪಗ್ರಹವೊಂದು ಅಲಾಸ್ಕಾ ಕರಾವಳಿಯಲ್ಲಿ ಸುರಕ್ಷಿತವಾಗಿ ಪತನಗೊಂಡಿದೆ.

1984ರಲ್ಲಿ ಕಕ್ಷೆಗೆ ಕಳುಹಿಸಲಾಗಿದ್ದ ಉಪಗ್ರಹವು ಭಾನುವಾರ ತಡರಾತ್ರಿ ಬೇರಿಂಗ್‌ ಸಮುದ್ರದಲ್ಲಿ ಪತನಗೊಂಡಿತು. ಇದರಿಂದ ಯಾವುದೇ ಹಾನಿಯಾದ ಬಗ್ಗೆ ಅಥವಾ ಭಗ್ನಾವಶೇಷಗಳು ಲಭ್ಯವಾದ ಬಗ್ಗೆ ವರದಿ ಇಲ್ಲ ಎಂದು ನಾಸಾದ ಪ್ರಕಟಣೆ ತಿಳಿಸಿದೆ.

2,450 ಕೆ.ಜಿ. ತೂಕದ ಉಪಗ್ರಹ ಭೂಮಿಗೆ ಸಾಗುವ ಹಾದಿಯಲ್ಲಿ ಬಾಹ್ಯಾಕಾಶದಲ್ಲಿಯೇ ಭಸ್ಮಗೊಳ್ಳುವ ಸಾಧ್ಯತೆ ಇದೆ ಎಂದು ನಾಸಾ ಕಳೆದ ವಾರ ತಿಳಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.